ಭಾರಿ ಮಳೆಗೆ ನದಿಯಂತಾದ ಸವದತ್ತಿ, ಸಿಡಿಲಿಗೆ ರೈತ ಸೇರಿ ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ, ಮೇ 18-ಜಿಲ್ಲೆಯಲ್ಲಿ ಸತತವಾಗಿ ನಾಲ್ಕು ಗಂಟೆಯೂ ಹೆಚ್ಚು ಕಾಲ ಸುರಿದ ಮಳೆಯಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣ ನದಿಯಂತಾಗಿತ್ತು. ಜಿಲ್ಲೆಯಲ್ಲಿ ನಿನ್ನೆ ಸಂಜೆ ಭಾರೀ ಮಳೆ ಸುರಿದಿದ್ದು, ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ದೇವಿಯ ದರ್ಶನಕ್ಕೆ ಬಂದಿದ್ದ ಭಕ್ತರು ಕೆಲ ಕಾಲ ಆತಂಕಕ್ಕೊಳಗಾಗಿದ್ದರು.ದೇವಸ್ಥಾನದ ಆವರಣದ ಸುತ್ತ ಇದ್ದ ಅಂಗಡಿಗಳಿಗೂ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಸಾಮಗ್ರಿಗಳು ನೀರು ಪಾಲಾಗಿವೆ. ಕೆಲ ಸಮಯದ ಬಳಿಕ ಮಳೆ ತಗ್ಗುತ್ತಿದ್ದಂತೆ ದೇವಸ್ಥಾನಕ್ಕೆ ಬಂದಿದ್ದ ಭಕ್ತರು ಮನೆಗೆ ತೆರಳಿದರು.

ಜಿಲ್ಲೆಯಲ್ಲಿ ಸಿಡಿಲು ಸಹಿತ ಭಾರೀ ಮಳೆಗೆ ರೈತ, ಹರಳಿಕಟ್ಟೆ ಗ್ರಾಮದ ನಿವಾಸಿ ಪಂಚಪ್ಪ ಬೆನಕಟ್ಟಿ(57) ಬಲಿಯಾಗಿದ್ದಾರೆ. ಏಕಾಏಕಿ ಸಂಜೆ ಗಾಳಿ ಸಹಿತ ಮಳೆ ಆರಂಭವಾಗಿದ್ದು, ಗದಗ ಜಿಲ್ಲೆಯ ರೋಣಾ ಪಟ್ಟಣದ ಮರದ ಕೆಳಗೆ ನಿಂತಿದ್ದ ಯುವಕನಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ.

Facebook Comments