ಮಲೇಷಿಯಾ ಮಾಜಿ ಪ್ರಧಾನಿ ನಿವಾಸ, ಕಚೇರಿಗಳ ಮೇಲೆ ದಾಳಿ : ಭಾರೀ ನಗದು, ಚಿನ್ನ ವಶ

ಈ ಸುದ್ದಿಯನ್ನು ಶೇರ್ ಮಾಡಿ

Malaysia

ಕೌಲಾಲಂಪೂರ್, ಮೇ 18- ಚುನಾವಣೆಯಲ್ಲಿ ಪರಾಭವಗೊಂಡ ಹಗರಣಗಳ ಕಳಂಕಿತ ಮಾಜಿ ಪ್ರಧಾನಿ ನಜೀಬ್ ರಜಾಕ್ ಅವರ ಮನೆಗಳು ಮತ್ತು ಕಚೇರಿಗಳ ಮೇಲೆ ಇಂದು ಮುಂಜಾನೆ ದಾಳಿ ನಡೆಸಿದ ಮಲೇಷ್ಯಾ ಪೊಲೀಸರು ಆಕರ್ಷಕ ವಿನ್ಯಾಸ ಕೈಚೀಲಗಳಲ್ಲಿ ಇದ್ದ ಭಾರೀ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿ ವೇಳೆ ಡಿಸೈನಲ್ ಹ್ಯಾಂಡ್‍ಬಾಗ್‍ಗಳು, ಅವುಗಳಲ್ಲಿದ್ದ ಅಪಾರ ನಗದು, ಚಿನ್ನ ಹಾಗೂ ಮತ್ತಿತ್ತರ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಲೇಷ್ಯಾ ಪೊಲೀಸ್ ಇಲಾಖೆಯ ವಾಣಿಜ್ಯ ಅಪರಾಧ ತನಿಖಾ ಘಟಕದ ಮುಖ್ಯಸ್ಥ ಅಮರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಂದು ಸ್ಥಳದ ಮೇಲೆ ನಡೆಸಿದ ದಾಳಿ ವೇಳೆ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳು ಪತ್ತೆಯಾಗಿದ್ದು, ಅವುಗಳ ಅಗಾಧತೆಯಿಂದ ತಕ್ಷಣಕ್ಕೆ ಮೌಲ್ಯವನ್ನು ಅಂದಾಜು ಮಾಡಲು ಸಾಧ್ಯವಾಗಿಲ್ಲ ಎಂದು ಸಿಂಗ್ ಹೇಳಿದ್ದಾರೆ. ನಮ್ಮ ಸಿಬ್ಬಂದಿ 72 ಬ್ಯಾಗ್‍ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ಮಲೇಷ್ಯಾದ ರಿನ್‍ಗಿಟ್, ಅಮೆರಿಕ ಡಾಲರ್ ಕರೆನ್ಸಿಗಳು, ದುಬಾರಿ ವಾಚುಗಳು ಮತ್ತು ಚಿನ್ನಾಭರಣಗಳು ಪತ್ತೆಯಾಯಿತು ಎಂದು ಅವರು ವಿವರಿಸಿದ್ದಾರೆ.

ರಾಜಧಾನಿ ಕೌಲಾಲಂಪೂರ್ ಹೃದಯಭಾಗದಲ್ಲಿರುವ ಮಾಜಿ ಪ್ರಧಾನಿ ನಜೀಬ್ ಅವರಿಗೆ ಸೇರಿದ ವೈಭವೋಪೇತ ವಸತಿಸ್ತೋಮಗಳ ಐಷಾರಾಮಿ ಗೃಹಗಳಲ್ಲಿ ಇವುಗಳು ಪತ್ತೆಯಾಗಿವೆ. ಮತ್ತಷ್ಟು ನಗ-ನಾಣ್ಯಗಳನ್ನು ಪತ್ತೆ ಮಾಡಲು ಶೋಧ ಕಾರ್ಯ ಮುಂದುವರಿದಿದೆ.

Facebook Comments

Sri Raghav

Admin