ಇಬ್ಬರು ಕೈ ಶಾಸಕರ ನಡೆ ಇನ್ನೂ ನಿಗೂಢ

ಈ ಸುದ್ದಿಯನ್ನು ಶೇರ್ ಮಾಡಿ

Anand-Sing

ಬೆಂಗಳೂರು, ಮೇ 19- ಕಾಂಗ್ರೆಸ್‍ನ ಇಬ್ಬರು ಶಾಸಕರು ಕೊನೆಗೂ ಕೈಕೊಟ್ಟಿದ್ದಾರೆ. ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್‍ಗೌಡ ಪಾಟೀಲ್, ವಿಜಯನಗರ ಕ್ಷೇತ್ರದ ಶಾಸಕ ಆನಂದ್‍ಸಿಂಗ್ ಅವರು ಇಂದು ಸದನಕ್ಕೆ ಹಾಜರಾಗಿರಲಿಲ್ಲ. ಚುನಾವಣೆ ಫಲಿತಾಂಶ ಘೋಷಣೆಯಾಗಿ ಅತಂತ್ರ ಪರಿಸ್ಥಿತಿ ನಿರ್ಮಾಣ ಸಂದರ್ಭದಲ್ಲೇ ಆನಂದ್‍ಸಿಂಗ್ ನಾಪತ್ತೆಯಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಸುಳಿವು ಕೂಡ ಕಾಂಗ್ರೆಸ್‍ನವರಿಗೆ ಸಿಕ್ಕಿಲ್ಲ.

ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ರತಾಪ್‍ಗೌಡ ಅವರು ರೆಸಾರ್ಟ್‍ಗೆ ಬಂದಿಲ್ಲ ಎಂದು ಹೇಳಲಾಗಿತ್ತು. ಆದರೆ, ಅವರು ಕೂಡ ಈವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಮತ್ತು ಸದನಕ್ಕೆ ಹಾಜರಾಗಿಲ್ಲ. ಆದರೆ, ಈ ಇಬ್ಬರು ತಾಜ್ ವೆಸ್ಟ್‍ಎಂಡ್‍ನಲ್ಲಿದ್ದಾರೆಂಬ ಮಾಹಿತಿ ಇಂದು ಲಭ್ಯವಾಗಿದ್ದು, ಇವರಿಬ್ಬರ ನಡೆ ನಿಗೂಢವಾಗಿದೆ.
ಇವರನ್ನು ಎಂ.ಬಿ.ಪಾಟೀಲ್ ಅವರು ಭೇಟಿ ಮಾಡಿ ಮನವೊಲಿಸುವ ಯತ್ನ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಇಂದು ಮಧ್ಯಾಹ್ನ ಕಲಾಪಕ್ಕೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Facebook Comments

Sri Raghav

Admin