ಕಮರಿಗೆ ಟ್ರ್ಯಾಕ್ಟರ್ ಉರುಳಿ 8 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

tracter

ಸಂಭಾಲ್, ಮೇ 19-ಟ್ರ್ಯಾಕ್ಟರ್ ಟ್ರೋಲಿಯೊಂದು ಕಮರಿಗೆ ಬಿದ್ದು ಎಂಟು ಮಂದಿ ಮೃತಪಟ್ಟು, ಇತರ ಐವರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಸಂಭಾಲ್‍ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.  ಮೊರಾದಾಬಾದ್‍ನಿಂದ ಕೆಲವು ಜನರನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ರಾಜ್‍ಪುರ್ ಪ್ರದಶದ ಅನೂಪ್‍ಶಹರ್ ರಸ್ತೆಯ ಟಿ-ಪಾಯಿಂಟ್‍ನಲ್ಲಿ ಹಳ್ಳಕ್ಕೆ ಉರುಳಿತು. ಈ ದುರ್ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟು, ಇತರ ಐವರು ಗಾಯಗೊಂಡರು ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಶಕೀಲ್ ಅಹಮದ್ ತಿಳಿಸಿದ್ದಾರೆ.

ಅಲಿಗಢದಲ್ಲಿ ಕಾರ್ಪೆಟ್ ಮಾರಾಟ ಮಾಡಲು ಇವರು ಟ್ರ್ಯಾಕ್ಟರ್ ಟ್ರೋಲಿಯಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.  ಗಾಯಾಳುಗಳನ್ನು ರಾಜ್‍ಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ.  20 ಪ್ರವಾಸಿಗರಿಗೆ ಗಾಯ : ಹಿಮಾಚಲ ಪ್ರದೇಶದ ಬಿಲಾಸ್‍ಪುರ್-ಶಿಮ್ಲಾ ಹೆದ್ದಾರಿಯ ಮಾಂಗ್ರೂಟ್ ಬಳಿ ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.  ಗುಜರಾತ್‍ನ 41 ಪ್ರವಾಸಿಗರನ್ನು ಶಿಮ್ಲಾದಿಂದ ಮನಾಲಿಗೆ ಕರೆದೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿ ಮಗುಚಿ ಬಿತ್ತು. ಈ ಘಟನೆಯಲ್ಲಿ ಎರಡೂ ಕಾರುಗಳಿಗೂ ಹಾನಿಯಾಗಿದೆ.

Facebook Comments

Sri Raghav

Admin