ಕಾಂಗ್ರೆಸ್‍ಗೆ ಕೈಕೊಟ್ಟಿರುವ ಇಬ್ಬರು ಶಾಸಕರ ನೆತ್ತಿ ಮೇಲೆ ಅನರ್ಹತೆ ತೂಗುಗತ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Anand-Sing
ಬೆಂಗಳೂರು, ಮೇ 19- ಕಾಂಗ್ರೆಸ್‍ಗೆ ಕೈಕೊಟ್ಟಿರುವ ಇಬ್ಬರು ಶಾಸಕರ ನೆತ್ತಿಯ ಮೇಲೆ ಅನರ್ಹತೆಯ ತೂಗುಗತ್ತಿಯಾಡುತ್ತಿದೆ. ಇಂದು ಸದನಕ್ಕೆ ಮಸ್ಕಿ ಶಾಸಕ ಪ್ರತಾಪ್‍ಗೌಡ, ವಿಜಯನಗರ ಶಾಸಕ ಆನಂದ್‍ಸಿಂಗ್ ಗೈರು ಹಾಜರಾದರೆ, ಕಾಂಗ್ರೆಸ್ ಪಕ್ಷ ಅವರಿಗೆ ವಿಪ್ ಜಾರಿ ಮಾಡಲಿದೆ. ವಿಪ್ ಜಾರಿಯಾದರೆ ಅವರ ಶಾಸಕತ್ವ ಹೋಗುತ್ತದೆ.

ಇಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಆದೇಶದ ಮೇರೆಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಎಲ್ಲ 78 ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ವಿಶ್ವಾಸಮತದ ವಿರುದ್ಧ ಮತ ಚಲಾಯಿಸಬೇಕೆಂದು ವಿಪ್ ಜಾರಿ ಮಾಡಬೇಕಿತ್ತು. ಆದರೆ, ಈ ಬಾರಿ ಕಡ್ಡಾಯವಾಗಿ ಹಾಜರಿದ್ದು, ವಿಶ್ವಾಸಮತದ ವಿರುದ್ಧ ಮತ ಚಲಾಯಿಸಬೇಕೆಂದು ವಿಪ್ ಜಾರಿ ಮಾಡಲಾಗಿದೆ. ಹಾಗಾಗಿ ಕೈಕೊಟ್ಟಿರುವ ಇಬ್ಬರು ಶಾಸಕರು ಕಡ್ಡಾಯವಾಗಿ ಹಾಜರಿರಬೇಕು. ಅವರು ಸದನಕ್ಕೆ ಹಾಜರಾಗದಿದ್ದರೆ ವಿಪ್ ಉಲ್ಲಂಘನೆಯಾಗಿ ಅವರ ಶಾಸಕತ್ವ ಹೋಗುವ ಸಾಧ್ಯತೆ ಇದೆ. ಹಾಗಾಗಿ ಅವರ ನೆತ್ತಿಯ ಮೇಲೆ ತೂಗುಗತ್ತಿ ಆಡುತ್ತಿದೆ.

ಅವರಿಗೆ ನೇರವಾಗಿ ವಿಪ್ ನೀಡಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ, ಇಂಟರ್‍ನೆಟ್ ಮೂಲಕ ಎಸ್‍ಎಂಎಸ್, ಸಾಮಾಜಿಕ ಜಾಲತಾಣಗಳ ಮೂಲಕ ವಿಪ್ ಮಾಹಿತಿ ಕಳುಹಿಸಿಕೊಡಲಾಗಿದೆ. ಇಷ್ಟಕ್ಕೂ ಬಂದು ಅವರು ಹಾಜರಾಗದಿದ್ದರೆ ಅವರ ಶಾಸಕತ್ವ ತಾನಾಗಿಯೇ ಅನರ್ಹವಾಗಲಿದೆ. ಈ ಇಬ್ಬರು ಶಾಸಕರು ಬೆಂಗಳೂರಿನಲ್ಲೇ ಇದ್ದು, ಅವರನ್ನು ಸದನಕ್ಕೆ ಕರೆತರುವ ಪ್ರಯತ್ನವನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ.

Facebook Comments

Sri Raghav

Admin