ಕಾಶ್ಮೀರದಲ್ಲಿ 25,000 ಕೋಟಿ ರೂ. ಯೋಜನೆಗಳಿಗೆ ಮೋದಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ಜಮ್ಮು, ಮೇ 19- ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು 25,000 ಕೋಟಿ ರೂ.ಗಳ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಲೇಹ್, ಜಮ್ಮು ಮತ್ತು ಕಾಶ್ಮೀರದ ಮೂರು ಪ್ರಾಂತ್ಯಗಳಿಗೆ ಇಂದು ಒಂದು ದಿನದ ಭೈೀಟಿ ನೀಡಿದ ಪ್ರಧಾನಿ ಅವರು ವಿವಿಧ ಅಭಿವೃದ್ದಿ ಕಾರ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಶ್ರೀನಗರ, ಕಾರ್ಗಿಲ್ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸುವ ಏಷ್ಯಾದ ಅತಿ ಉದ್ದ ಮತ್ತು ಮಹತ್ವದ ದ್ವಿಮುಖ ಝೋಜಿಲಾ ಸುರಂಗ ಮಾರ್ಗದ ಕಾಮಗಾರಿಗೆ ಮೋದಿ ಲೇಹ್‍ನಲ್ಲಿ ಚಾಲನೆ ನೀಡಿದರು. ಬೌದ್ಧರ ಧಾರ್ಮಿಕ ಗುರು 19ನೇ ಕುಶೋಕ್ ಬಾಕುಲಾ ರಿನ್‍ ಪೋಚೆ ಅವರ 100ನೇ ಜನ್ಮಜಯಂತಿ ಸಮಾರೋಪ ಸಮಾರಂಭದಲ್ಲಿ ಅವರು ಪಾಲ್ಗೊಂಡರು.

Modi--01

ಈ ಸಮಾರಂಭಗಳಲ್ಲಿ ಮಾತನಾಡಿದ ಮೋದಿ, ಒಂದೇ ದಿನದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 25,000 ಕೋಟಿ ರೂ.ಗಳ ಮೊತ್ತದ ವಿವಿಧ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಎಂದರು. ದೇಶಕ್ಕೆ ಸ್ವಾತಂತ್ರ ಲಭಿಸಿ 70 ವರ್ಷಗಳಾಗಿದ್ದರೂ, ನಾಲ್ಕು ಕೋಟಿ ಮನೆಗಳಲ್ಲಿ ಈಗಲೂ ವಿದ್ಯುತ್ ಸೌಲಭ್ಯವಿಲ್ಲ. ಇನ್ನೊಂದುವರೆ ವರ್ಷದಲ್ಲಿ ಈ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.  ಮೋದಿ ಕಾಶ್ಮೀರ ಭೇಟಿ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿಗಳು ಕರೆ ನೀಡಿದ ಕಾಶ್ಮೀರ ಬಂದ್ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರತ್ಯೇಕತಾವಾದಿ ನಾಯಕರಾದ ಮಿರ್ವಾಜ್ ಉಮರ್ ಫಾರೂಕ್ ಮತ್ತು ಸೈಯದ್ ಅಲಿ ಶಾ ಗಿಲಾನಿ ಮೊದಲಾದವರನ್ನು ಗೃಹ ಬಂಧನದಲ್ಲಿಡಲಾಗಿತ್ತು.

Facebook Comments

Sri Raghav

Admin