ಕೆಆರ್ ಎಸ್ ಜಲಾಶಯದಲ್ಲಿ ಕುಸಿದ ನೀರಿನ ಮಟ್ಟ

ಈ ಸುದ್ದಿಯನ್ನು ಶೇರ್ ಮಾಡಿ

KRS-Dam
ಮೈಸೂರು, ಮೇ 19- ಬೇಸಿಗೆ ಹಿನ್ನೆಲೆಯಲ್ಲಿ ಮೈಸೂರು ಸಮೀಪದ ಕೃಷ್ಣರಾಜ ಜಲಾಶಯದಲ್ಲಿ(ಕೆಆರ್‍ಎಸ್) ನೀರಿನ ಮಟ್ಟ ಕುಸಿದಿದೆ. ಕೆಆರ್‍ಎಸ್‍ನಲ್ಲಿ ಇಂದಿನ ಮಟ್ಟ 69.37 ಅಡಿ ಇದೆ. ಒಳಹರಿವು 482 ಕ್ಯೂಸೆಕ್ಸ್ ಹೊರಹರಿವು 943 ಕ್ಯೂಸೆಕ್ಸ್‍ಗಳ ಜಲಾಶಯದ ನೀರನ್ನು ಕೇವಲ ಕುಡಿಯಲು ಮಾತ್ರ ಬಳಸುವುದಕ್ಕಾಗಿ 900 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಈಗ 4.2 ಟಿಎಂಸಿ ಅಡಿ ನೀರಿದ್ದು, 2.4 ಟಿಎಂಸಿಯಷ್ಟು ನೀರನ್ನು ಕುಡಿಯಲು ಬಳಸವಹುದಾಗಿದೆ. ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಅಧಿಕರಿಗಳು ತಿಳಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 70 ಅಡಿ ನೀರಿತ್ತು.

ಕೆಆರ್‍ಎಸ್‍ನಿಂದ ಬೆಂಗಳೂರು-ಮೈಸೂರು, ರಾಮನಗರ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯಲು ಮಾತ್ರ ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದೆ. ನೀರಿನ ಕೊರತೆಯಿಂದಾಗಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ.

Facebook Comments

Sri Raghav

Admin