ಕೊನೆಗೂ ಸದನಕ್ಕೆ ಹಾಜರಾದ ಶಾಸಕರಾದ ಆನಂದ್‍ಸಿಂಗ್ ಮತ್ತು ಪ್ರತಾಪ್‍ಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Anand-Singh--01

ಬೆಂಗಳೂರು, ಮೇ 19-ಚುನಾವಣಾ ಫಲಿತಾಂಶ ಪ್ರಕಟವಾದ ದಿನದಿಂದ ಕಾಂಗ್ರೆಸ್‍ಗೆ ಕೈ ಕೊಟ್ಟಿದ್ದ ಮಸ್ಕಿ ಶಾಸಕ ಪ್ರತಾಪ್‍ಗೌಡ ಹಾಗೂ ವಿಜಯನಗರ ಶಾಸಕ ಆನಂದ್‍ಸಿಂಗ್ ಅವರು ಕೊನೆಗೂ ಸದನಕ್ಕೆ ಹಾಜರಾದರು. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ದಿನಾಂಕ ನಿಗದಿ ಮಾಡಿದ ಮೇಲೆ ಈ ಇಬ್ಬರು ಶಾಸಕರು ನಾಪತ್ತೆಯಾಗಿದ್ದರು.  ಕಾಂಗ್ರೆಸ್‍ನವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸಲು ಹಕ್ಕು ಮಂಡಿಸಿತಾದರೂ ರಾಜ್ಯಪಾಲರು ಅವಕಾಶ ನೀಡಿರಲಿಲ್ಲ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಒಟ್ಟಾಗಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು.

ಈ ಇಬ್ಬರನ್ನು ಹೊರತುಪಡಿಸಿ ಕಾಂಗ್ರೆಸ್ 76, ಜೆಡಿಎಸ್ 37, ಇಬ್ಬರು ಪಕ್ಷೇತರರು ಒಟ್ಟಾಗಿ ಬಿಡದಿಯ ಈಗಲ್‍ಟನ್ ರೆಸಾರ್ಟ್ ಮತ್ತು ಹೈದರಾಬಾದ್‍ನ ರೆಸಾರ್ಟ್‍ನಲ್ಲಿ ವಾಸ್ತವ್ಯ ಮಾಡಿದ್ದರು. ಕಳೆದ ಮೂರ್ನಾಲ್ಕು ದಿನದಿಂದ ಈ ಇಬ್ಬರು ಶಾಸಕರು ಕಾಂಗ್ರೆಸ್‍ನವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. 24 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಇಂದು ಬಿ.ಎಸ್.ಯಡಿಯೂರಪ್ಛ್ಪ ಅವರು ಅಧಿವೇಶನ ಕರೆದಿದ್ದರು. ಬೆಳಗ್ಗೆ ಈ ಅಧಿವೇಶನದಲ್ಲಿ ಪಾಲ್ಗೊಂಡಿರಲಿಲ್ಲ. ಇವರು ಗೋಲ್ಡ್ ಪಿಂಚ್ ಹೋಟೆಲ್‍ನಲ್ಲಿದ್ದಾರೆಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಪಕ್ಷದ ವಿಪ್ ಹಿಡಿದು ಅಲ್ಲಿಗೆ ತೆರಳಿದರಾದರೂ ಅಲ್ಲಿ ವಿಪ್ ಕೊಡಲು ಸಾಧ್ಯವಾಗಲಿಲ್ಲ.

ಈ ಇಬ್ಬರು ಶಾಸಕರು ಪೊಲೀಸ್ ರಕ್ಷಣೆ ಕೋರಿದ್ದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಸುನೀಲ್‍ಕುಮಾರ್, ಡಿಜಿ ನೀಲಮಣಿ ಎನ್.ರಾಜು ಅವರೇ ತೆರಳಿ ಖುದ್ದು ರಕ್ಷಣೆ ನೀಡಿದ್ದರು. ನಂತರ ಮಧ್ಯಾಹ್ನ ಇಬ್ಬರು ಶಾಸಕರು ಪೊಲೀಸ್ ರಕ್ಷಣೆಯಲ್ಲಿ ವಿಧಾನಸೌಧಕ್ಕೆ ಆಗಮಿಸಿದರು. ಕೂಡಲೇ ವಿಧಾನಸೌಧದ ಪ್ರವೇಶ ದ್ವಾರದಲ್ಲೇ ಡಿ.ಕೆ.ಶಿವಕುಮಾರ್ ಅವರು ಮೊದಲು ಪ್ರತಾಪ್‍ಗೌಡ ಅವರನ್ನು ಕರೆದೊಯ್ದು ಒಳಗೆ ಕೂರಿಸಿದರು. ನಂತರ ಆನಂದ್‍ಸಿಂಗ್ ಅವರನ್ನು ಒಳಗೆ ಕರೆದೊಯ್ದರು. ಈ ಇಬ್ಬರು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಅಲ್ಲಿಯೇ ಅವರಿಗೆ ವಿಪ್ ನೀಡಲಾಯಿತು.

Facebook Comments

Sri Raghav

Admin