ಕ್ಯೂಬಾ ರಾಜಧಾನಿ ಹವಾನ ಬಳಿ ವಿಮಾನ ಪತನಗೊಂಡು 107 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Cuba
ಹವಾನ, ಮೇ 19-ದ್ವೀಪರಾಷ್ಟ್ರ ಕ್ಯೂಬಾ ರಾಜಧಾನಿ ಹವಾನ ಬಳಿ ವಿಮಾನವೊಂದು ಪತನಗೊಂಡು 107 ಮಂದಿ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ತೀವ್ರ ಗಾಯಗೊಂಡ ಮೂವರು ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಸಿಬ್ಬಂದಿ ಸೇರಿ 110 ಮಂದಿ ಇದ್ದ ಕ್ಯೂಬಾದ ಏರ್‍ವೇಸ್ ವಿಮಾನ ಹವಾನದಿಂದ ಮೇಲೇರಿದ ಸ್ವಲ್ಪ ಹೊತ್ತಿನಲ್ಲೇ ಪತನಗೊಂಡಿತು. ಈ ದುರಂತದಲ್ಲಿ 107 ಮಂದು ಸಾವಿಗೀಡಾದರು. ವಿಮಾನಗಳ ಭಗ್ನಾವಶೇಷಗಳಿಂದ ಮೂವರು ಮಹಿಳೆಯರನ್ನು ಜೀವಂತವಾಗಿ ಹೊರೆಗೆ ಎಳೆಯಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಶೋಚನೀಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Cuba-2

40 ವರ್ಷಗಳಷ್ಟು ಹಳೆಯದಾದ ಬೊಯಿಂಗ್-737 ವಿಮಾನವನ್ನು ಕ್ಯೂಬಾನಾ ಡಿ ಏವಿಯಾಸಿಯೊನ್ ನಿರ್ವಹಿಸುತ್ತಿತ್ತು. ಜೋಸ್ ಮಾರ್ಟಿ ಏರ್ ಪೋರ್ಟ್ ಬಳಿ ಅರಣ್ಯ ಪ್ರದೇಶದ ಮೈದಾನದಲ್ಲಿ ಈ ವಿಮಾನ ಪತನಗೊಂಡು ಬೆಂಕಿಯೊಂದಿಗೆ ದಟ್ಟ ಹೊಗೆ ಆವರಿಸಿತು. ಮೆಕ್ಸಿಕೋದ ಆರು ಸಿಬ್ಬಂದಿ, ಅರ್ಜೆಂಟೈನಾದ ಇಬ್ಬರು ಹಾಗೂ ಉಳಿದವರು ಕ್ಯೂಬಾದ ಪ್ರಯಾಣಿಕರು ಈ ವಿಮಾನದಲ್ಲಿದ್ದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕ್ಯೂಬಾ ಅಧ್ಯಕ್ಷ ಮಿಗ್ಯೂಲ್ ಡಿಯಾಜ್-ಕ್ಯಾನೆಲ್ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದುರ್ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Cuba-3

Cuba-4

Cuba-5

 

Facebook Comments

Sri Raghav

Admin