ಜೆಡಿಎಸ್’ನ ಎಲ್ಲಾ 37ಶಾಸಕರಿಗೆ ವ್ಹಿಪ್ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

JDS--01
ಬೆಂಗಳೂರು, ಮೇ 19- ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಶ್ವಾಸ ಮತಯಾಚಿಸುವ ಸಂದರ್ಭದಲ್ಲಿ ವಿಶ್ವಾಸ ಮತದ ವಿರುದ್ಧವಾಗಿ ಮತ ಚಲಾಯಿಸುವಂತೆ ಜೆಡಿಎಸ್ ಶಾಸಕರಿಗೆ ವ್ಹಿಪ್ ನೀಡಲಾಗಿದೆ. ಜೆಡಿಎಸ್‍ನ ಎಲ್ಲಾ ಶಾಸಕರಿಗೂ ಇಂದು ವ್ಹಿಪ್ ನೀಡಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‍ನ ಎಲ್ಲ 37 ಮಂದಿ ಶಾಸಕರಿಗೂ ವ್ಹಿಪ್ ಜಾರಿ ಮಾಡಿದ್ದಾರೆ. ರಾಜ್ಯದ 15ನೇ ವಿಧಾನಸಭೆಯ ಮೊದಲ ಅಧಿವೇಶನ ಇಂದು ನಡೆಯುತ್ತಿದ್ದು, ಇಂದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸಮತಯಾಚನೆ ಮಾಡಲಿದ್ದಾರೆ.

Facebook Comments

Sri Raghav

Admin