‘ನಂಬರ್ ಗೇಮ್’ಗೆ ಕ್ಷಣಗಣನೆ, ವಿಶ್ವಾಸ ಗಳಿಸಿಕೊಳ್ಳುವರೇ ಸಿಎಂ ಯಡಿಯೂರಪ್ಪ…?

ಈ ಸುದ್ದಿಯನ್ನು ಶೇರ್ ಮಾಡಿ

Number-Game
ಬೆಂಗಳೂರು, ಮೇ 19- ಇಂದು ವಿಶ್ವಾಸಮತ ಸಾಬೀತಿಗೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಬಿಎಪಿ-ಕಾಂಗ್ರೆಸ್-ಜೆಡಿಎಸ್ ಮೂರೂ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಇಂದು ಸಂಜೆ 11 ಗಂಟೆ ವೇಳೆಗೆ ವಿಶೇಷ ಅಧಿವೇಶನ ಆರಂಭವಾಗಲಿದೆ. ಹಂಗಾಮಿ ಸ್ಪೀಕರ್ ಬೋಪಯ್ಯ ಅವರ ನೇತೃತ್ವದಲ್ಲಿ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಹಾಗೂ ವಿಧಾನಸೌಧದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಹೈದರಾಬಾದ್ ನಲ್ಲಿದ್ದ ಜೆಡಿಎಸ್ ಕಾಂಗ್ರೆಸ್ ಶಾಸಕರು ಈಗಾಗಲೇ ಬೆಂಗಳೂರು ತಪುಪಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ಭಾರಿ ಬಿಗಿ ಭದ್ರತೆ ನಡುವೆ ಸದನಕ್ಕೆ ಹಾಜರಾಗುವ ತಯಾರಿಯಲ್ಲಿದ್ದಾರೆ. ವಿಶ್ವಾಸಮತ ಪೂರ್ಣವಾಗಿ ನಂಬರ್ ಗೇಮ್ ಮೇಲೆ ನಡೆಯಲಿದೆ. ಆಪರೇಷನ್ ಕಮಲ ಭೀತಿಯಲ್ಲಿ ಹೈದರಾಬಾದ್‍ಗೆ ತೆರಳಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ಬೆಂಗಳೂರಿಗೆ ಈಗಾಗಲೇ ಹಿಂದಿರುಜಿದ್ದಾರೆ. ಬಿಜೆಪಿಯಲ್ಲೂ ಕೂಡ ಬಿರುಸಿನ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.

104 ಸದಸ್ಯ ಬಲ ಹೊಂದಿರುವ ಬಿಜೆಪಿ, ಬಹುಮತ ಸಾಬೀತಿಗೆ ಯಾವ ಕಸರತ್ತು ನಡೆಸಲಿದೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ. ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಹಕ್ಕನ್ನು ಪ್ರತಿಪಾದಿಸಲಿದೆ. ಹೇಗಾದರೂ ಮಾಡಿ ಬಹುಮತ ಸಾಬೀತು ಮಾಡಬೇಕೆಂದು ಬಿಜೆಪಿ ಪ್ರಯತ್ನ ಮುಂದುವರಿಸಿದೆ. ತಮ್ಮ ಶಾಸಕರನ್ನು ಆಪರೇಷನ್ ಕಮಲ ಭೀತಿಗೆ ಒಳಗಾಗದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಕಾಯ್ದುಕೊಂಡಿದ್ದಾರೆ. ಇಂದು ಸಂಜೆ 4 ಗಂಟೆಗೆ ವರೆಗೆ ನಿರಂತರ ರಾಜಕೀಯ ಚಟುವಟಿಕೆಗಳು ಮುಂದುವರಿಯಲಿವೆ.
ವಿಶ್ವಾಸಮತ ಪೂರ್ಣವಾಗಿ ನಂಬರ್ ಗೇಮ್ ಮೇಲೆ ನಡೆಯಲಿದೆ. ಈಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರ ಬಲಾಬಲ ಈ ಕೆಳಕಂಡಂತಿದೆ:
ಬಿಜೆಪಿ 104
ಕಾಂಗ್ರೆಸ್ 78
ಜೆಡಿಎಸ್ 37
ಬಿಎಸ್‍ಪಿ 01
ಪಕ್ಷೇತರ 02
ಒಟ್ಟು 222
ಸದಸ್ಯರ ಬಲದಲ್ಲಿ ಬಹುಮತ ಪಡೆಯಲು 112 ಸದಸ್ಯರ ವಿಶ್ವಾಸ ಪಡೆಯಬೇಕಾಗಿದೆ. ಕಾಂಗ್ರೆಸ್-ಜೆಡಿಎಸ್, ಪಕ್ಷೇತರ, ಬಿಎಸ್‍ಪಿ ಮೈತ್ರಿ ನಂ.118 ಆಗುತ್ತದೆ. ಬಿಜೆಪಿಯ ನಂ.104 ಇದೆ. ಬಿಜೆಪಿ ನಾಳಿನ ವಿಶ್ವಾಸಮತದಲ್ಲಿ ಗೆಲುವು ಸಾಧಿಸಬೇಕಾದರೆ 112 ಸದಸ್ಯರ ಬೆಂಬಲ ಪಡೆಯಬೇಕು. ಕುಮಾರಸ್ವಾಮಿ ಅವರು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದರಿಂದ ಎರಡು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಅವರು ಒಂದೇ ಮತ ಚಲಾಯಿಸಬೇಕು. ಆಗ ಸದಸ್ಯರ ಬಲ 221 ಆಗುತ್ತದೆ.

ವಿಧಾನಸೌಧದ ಸುತ್ತ ಬಿಗಿಭದ್ರತೆ :
ಇಂದು ಬಹುಮತ ಸಾಬೀತು ಹಿನ್ನಲೆ ವಿಧಾನಸೌಧದ ಸುತ್ತಮುತ್ತ 2 ಕಿ.ಮೀ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಸುಪ್ರೀಂಕೋರ್ಟ್ ಅದೇಶ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ. ಈ ವೇಳೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಹಾಗಾಗಿ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಯಾವುದೇ ಪ್ರತಿಭಟನೆ ಮಾಡುವಂತಿಲ್ಲ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

Facebook Comments

Sri Raghav

Admin