ಮಾರ್ಷಲ್‍ಗಳ ವಿರುದ್ಧ ವೇಣುಗೋಪಾಲ್ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

Venugopal--01
ಬೆಂಗಳೂರು, ಮೇ 19-ವಿಧಾನಸೌಧ ಪ್ರವೇಶಕ್ಕೆ ಕಿರಿಕಿರಿ ಮಾಡಿದ ಭದ್ರತಾ ಸಿಬ್ಬಂದಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹರಿಹಾಯ್ದಿದ್ದಾರೆ. ನೂತನ ಶಾಸಕರ ಪ್ರಮಾಣವಚನ ಸ್ವೀಕಾರ ಹಾಗೂ ವಿಶ್ವಾಸ ಮತ ಯಾಚನೆ ಕಲಾಪ ಕಾರ್ಯಕ್ರಮಕ್ಕೆಂದು ಆಗಮಿಸಿದ ಕೆ.ಸಿ.ವೇಣುಗೋಪಾಲ್ ಅವರನ್ನು ವಿಧಾನಸೌಧ ಪ್ರವೇಶ ದ್ವಾರದಲ್ಲಿ ಒಳಗೆ ಬಿಡದೆ ತಡೆದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವೇಣುಗೋಪಾಲ್, ಬಿಜೆಪಿಯ ಮುರಳೀಧರ್ ರಾವ್ ಅವರನ್ನು ಒಳಗೆ ಬಿಟ್ಟಿದ್ದೀರಿ. ನಮ್ಮನ್ನು ಏಕೆ ಬಿಡುತ್ತಿಲ್ಲ ಎಂದು ರೇಗಾಡಿದರು. ಮಾರ್ಷಲ್‍ಗಳು ಪಕ್ಷಪಾತ ಮಾಡುತ್ತಿದ್ದಾರೆ ಎಂದು ವೇಣುಗೋಪಾಲ್ ಅವರು ಆಕ್ರೋಶ ವ್ಯಕ್ತಪಡಿಸಿದಾಗ ಭದ್ರತಾ ಸಿಬ್ಬಂದಿ ಅವರನ್ನು ವಿಧಾನಸೌಧದ ಲಾಂಜ್‍ಗೆ ಬಿಟ್ಟರು.

Facebook Comments

Sri Raghav

Admin