ಹ್ಯಾರಿ-ಮಾರ್ಕೆಲ್ ರಾಯಲ್ ವೆಡ್ಡಿಂಗ್’ನಲ್ಲಿ ಗಮನ ಸೆಳೆದ ಕಪ್‍ ಕೇಕ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

royel-wedding

ವಾಷಿಂಗ್ಟನ್/ಲಂಡನ್, ಮೇ 19, ಮೇ 19-ಬ್ರಿಟನ್ ರಾಜಕುಮಾರ ಪ್ರಿನ್ಸ್ ಹ್ಯಾರಿ ಮತ್ತು ಅಮೆರಿಕ ನಟಿ ಮೇಘನ್ ಮಾರ್ಕೆಲ್ ಅವರ ಅದ್ದೂರಿ ವಿವಾಹ ಮಹೋತ್ಸವದ್ದೇ ಈಗ ಎಲ್ಲೆಡೆ ಸುದ್ದಿ. ಇಂದು ಇವರ ಮದುವೆ ಅದ್ದೂರಿಯಾಗಿ ನೆರವೇರಿತು. ಇದಕ್ಕೆ ಮುನ್ನ ವಾಷಿಂಗ್ಟನ್ ಕಪ್‍ಕೇಕ್ ಶಾಪ್‍ನಲ್ಲಿ ರಾಯಲ್ ವೆಡ್ಡಿಂಗ್ ಅಭಿರುಚಿಯ ಕಪ್‍ಕೇಕ್‍ಗಳು ವಿಶೇಷವಾಗಿ ಸಿದ್ದಗೊಂಡವು.  ಬ್ರಿಟನ್ ರಾಜಕುಮಾರ ಪ್ರಿನ್ಸ್ ಹ್ಯಾರಿ ಮತ್ತು ಅಮೆರಿಕ ನಟಿ ಮೇಘನ್ ಮಾರ್ಕೆಲ್ ಅವರ ಅದ್ದೂರಿ ವಿವಾಹ ಮಹೋತ್ಸª ಸಂದರ್ಭದಲ್ಲೇ ವಾಷಿಂಗ್ಟನ್ ಸಹೋದರಿಯರು ವಿಶೇಷ ಕಪ್‍ಕೇಕ್‍ಗಳನ್ನು ಸಿದ್ಧಗೊಳಿಸಿ ಗಮನಸೆಳೆದರು.

cup-cakes-royal-wedding

cup-cakes-royal-wedding-1

ತನ್ನ ರಸಭಕ್ಷ್ಯ ರುಚಿಯಿಂದಾಗಿ ಈಗಾಗಲೇ ರಾಷ್ಟ್ರೀಯ ಮಾಧ್ಯಮದ ಗಮನಸೆಳೆದಿರುವ ಜಾರ್ಜ್‍ಟೌನ್ ಕಪ್‍ಕೇಕ್ ಶಾಪ್, ರಾಯಲ್ ವೆಡ್ಡಿಂಗ್ ಡಜನ್ ಎಂಬ ವಿಶೇಷ ಭಕ್ಷ್ಯಗಳನ್ನು ಸಿದ್ದಗೊಳಿಸಿ ಭೋಜನಪ್ರಿಯರ ಜಿಹ್ವಾಚಾಪಲ್ಯ ತಣಿಸಿತು.  ಹ್ಯಾರಿ ಮತ್ತು ಮಾಕ್ರ್ಲೆ ವಿವಾಹ ಮಹೋತ್ಸವಕ್ಕೆ ಸಾಂಕೇತಿಕವಾಗಿ ಸಿದ್ದಪಡಿಸಲಾದ ಕಪ್ ಕೇಕ್‍ಗಳು ನೋಡಲು ಅತ್ಯಾಕರ್ಷಕ ಮತ್ತು ತಿನ್ನಲು ಅತ್ಯಂತ ಸ್ವಾದವಾಗಿತ್ತು. ಇಂಗ್ಲಿಷ್ ರೋಸ್ ಮತ್ತು ಲೆಮನ್ ಎಲ್ಟರ್‍ಫ್ಲವರ್ ಸೇರಿದಂತೆ ವಿವಿಧ ವಿನ್ಯಾಸಗಳು ಈ ಕೇಕ್ ಮೇಲೆ ರೂಪುಗೊಂಡಿದ್ದು ವಿಶೇಷ. ವಾಷಿಂಗ್ಟನ್ ಸಹೋದರಿಯರಾದ ಸೋಫೀ ಲಾಮೊಂಟಗ್ನೆ ಮತ್ತು ಕ್ಯಾಥೆರಿನ್ ಬೆರ್ಮನ್ ಈ ವಿಶೇಷ ಕಪ್ ಕೇಕ್‍ಗಳು ಮತ್ತು ರಸಭಕ್ಷ್ಯಗಳ ಸೃಷ್ಟಿಕರ್ತರು. ಈ ಕಪ್‍ಕೇಕ್ ಶಾಪ್‍ನಲ್ಲಿ ಸಿದ್ಧಗೊಂಡ ರಾಯಲ್ ವೆಡ್ಡಿಂಗ್ ಸಿಹಿ ತಿನಿಸುಗಳನ್ನು ಅನೇಕರು ಸವಿದು ಮೆಚ್ಚುಗೆ ಸೂಚಿಸಿದರು.

Facebook Comments