3.30ಕ್ಕೆ ವಿಧಾನಸಭೆ ಕಲಾಪ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Session--01
ಬೆಂಗಳೂರು, ಮೇ 19-ತೀವ್ರ ಕುತೂಹಲ ಕೆರಳಿಸಿದ ವಿಧಾನಸಭೆಯ ಕಲಾಪದಲ್ಲಿಂದು 210 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು. ಮೈಸೂರು-ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ 26 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಲು ಬಾಕಿ ಇತ್ತು.

ಅದಕ್ಕೂ ಮುನ್ನ ಮಧ್ಯಾಹ್ನ 1.20ಕ್ಕೆ ಸ್ಪೀಕರ್ ಬೋಪಯ್ಯ ಅವರು ಕಲಾಪವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಿದರು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಮಧ್ಯಾಹ್ನ 4 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕು. ಆ ಹಿನ್ನೆಲೆಯಲ್ಲಿ ಬೇಗ ಬೇಗ ಪ್ರಮಾಣವಚನ ಸ್ವೀಕಾರ ಮುಗಿಸುವಂತೆ ಸ್ಪೀಕರ್ ಮೇಲೆ ಒತ್ತಡ ಹೇರಲಾಗುತ್ತಿತ್ತು.

ಈ ಹಂತದಲ್ಲಿ ಆರಂಭದಲ್ಲಿ ಇಬ್ಬಿಬ್ಬರಿಗೆ ಮಾತ್ರ ಪ್ರಮಾಣವಚನ ಬೋಧಿಸಿದರೆ, ನಂತರ ಮೂವರಿಗೆ ತದನಂತರ 5 ಮಂದಿ ಶಾಸಕರಿಗೆ ಒಟ್ಟಾಗಿ ಪ್ರಮಾಣವಚನ ಬೋಧಿಸಲಾಯಿತು. ಕೊಡಗು ಮತ್ತು ಮಂಗಳೂರು ಭಾಗದ ಶಾಸಕರು ಪ್ರಮಾಣವಚನ ಸ್ವೀಕಾರ ಮುಗಿದ ಬಳಿಕ ಹಂಗಾಮಿ ಸ್ಪೀಕರ್ ಬೋಪಯ್ಯ ಅವರು ಕಲಾಪವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಿದರು.

ಇದಕ್ಕೂ ಮುನ್ನ ಶಾಸಕ ವಿ.ಸೋಮಣ್ಣ ಅವರು ಸಿದ್ದಗಂಗಾ ಶ್ರೀಗಳ ಹೆಸರಿನಲ್ಲಿ ಮಳವಳ್ಳಿಯ ಅನ್ನದಾನಿ ಮತ್ತು ಕುಂದಗೋಳಿನ ಶಿವಳ್ಳಿ ಅವರು ಅಂಬೇಡ್ಕರ್ ಹೆಸರಿನಲ್ಲಿ, ಮಂಗಳೂರು ಉತ್ತರ ಕ್ಷೇತ್ರದ ಭರತ್‍ಶೆಟ್ಟಿ ಅವರು ಕಟಿಲು ಪರಮೇಶ್ವರಿ ಹೆಸರಿನಲ್ಲಿ, ಬಸವರಾಜ ಪಾಟೀಲ್ ಯತ್ನಾಳ್ ಅವರು ಗೋಮಾತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಭೋಜನ ವಿರಾಮದ ನಂತರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ನಂತರ ವಿಶ್ವಾಸಮತಯಾಚನೆಗೆ ಅವಕಾಶ ನೀಡಲಾಯಿತು. ಬಿಎಸ್‍ವೈ ಪ್ರಸ್ತಾವವನ್ನು ಮಂಡಿಸಿ ತಮ್ಮ ಸರ್ಕಾರಕ್ಕೆ ವಿಶ್ವಾಸ ಮತ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

Facebook Comments

Sri Raghav

Admin