ಮಕ್ಕಳ ಕಳ್ಳನೆಂದು ಶಂಕಿಸಿ ಕ್ರೇನ್ ಆಪರೇಟರ್ ಥಳಿತ

ಈ ಸುದ್ದಿಯನ್ನು ಶೇರ್ ಮಾಡಿ

Rapist-Beaten
ಕಲಬುರ್ಗಿ,ಮೇ 20- ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಕಾರ್ಯನಿಮಿತ್ತ ಗ್ರಾಮಕ್ಕೆ ಬಂದಿದ್ದ ಕ್ರೇನ್ ಆಪರೇಟರ್‍ನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ಸೇಡಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ರಾತ್ರಿ ತಾಲ್ಲೂಕಿನ ಕೂಡ್ಲ ಗ್ರಾಮಕ್ಕೆ ಫ್ಯಾಕ್ಟರಿಯ ಕ್ರೇನ್ ಆಪರೇಟರ್ ಅವತಾರ್ ಸಿಂಗ್ ಎಂಬುವರು ಗ್ರಾಮಕ್ಕೆ ಬಂದಿದ್ದರು.

ಗ್ರಾಮದಾದ್ಯಂತ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಇರುವುದರಿಂದ ಅವತಾರ್ ಸಿಂಗ್ ಅವರನ್ನು ಮಕ್ಕಳ ಕಳ್ಳನೆಂದು ಭಾವಿಸಿ ಗ್ರಾಮಸ್ಥರು ಆತನನ್ನು ಹಿಡಿದು ಥಳಿಸಿದ್ದಾರೆ. ಗ್ರಾಮಸ್ಥರ ಥಳಿತದಿಂದ ಗಾಯಗೊಂಡಿರುವ ಅವತಾರ್ ಸಿಂಗ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin