ಹೃದಯಘಾತದಿಂದ ಯಡಿಯೂರಪ್ಪ ಅವರ ಕಟ್ಟಾ ಅಭಿಮಾನಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ದಾವಣಗೆರೆ,ಮೇ 20- ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಬೇಸರಗೊಂಡಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ಹೃದಯಘಾತದಿಂದ ನಿಧನರಾಗಿದ್ದಾರೆ. ತಾಲ್ಲೂಕಿನ ಹುಣಸೇಮರ ಗ್ರಾಮದ ಚನ್ನಬಸಪ್ಪ (75) ಮೃತಪಟ್ಟ ವ್ಯಕ್ತಿ.  ಬಿ.ಎಸ್.ಯಡಿಯೂರಪ್ಪ ಅವರ ಕಟ್ಟಾ ಅಭಿಮಾನಿ, ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಚನ್ನಬಸಪ್ಪ , ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ಸಿಗಲಿಲ್ಲವೆಂದು ಬೇಸರಗೊಂಡಿದ್ದರು. ಈ ಬಗ್ಗೆ ತಮ್ಮ ಸ್ನೇಹಿತರೊಂದಿಗೂ ಹೇಳಿಕೊಂಡಿದ್ದರು ಎನ್ನಲಾಗಿದೆ.  ನಿನ್ನೆ ಬೆಳಗ್ಗೆಯಿಂದ ಟಿವಿ ಮುಂದೆಯೇ ಕುಳಿತು ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ವೀಕ್ಷಿಸಿದ್ದರು. ಅತ್ಯಂತ ಬೇಸರಗೊಂಡಿದ್ದ ಚನ್ನಬಸಪ್ಪ ಅವರು ಹೃದಯಾಘಾತದಿಂದ ಅಸುನೀಗಿದ್ದಾರೆ.

Facebook Comments

Sri Raghav

Admin