12ನೇ ತರಗತಿಯಲ್ಲಿ ಶೇ.96.5 ಒಂದೇ ರೀತಿ ಅಂಕ ಗಳಿಸಿದ ಅವಳಿ ಸಹೋದರರು..!

ಈ ಸುದ್ದಿಯನ್ನು ಶೇರ್ ಮಾಡಿ

Mumbai-Twins

ನವದೆಹಲಿ, ಮೇ 20- ಮುಂಬೈನ ರೋಹನ್ ಮತ್ತು ರಾಹುಲ್ ನೋಡುವುದಕ್ಕೆ ಒಂದೇ ರೀತಿ (ಅವಳಿ ಸಹೋದರರು) ಇದ್ದಾರಲ್ಲದೇ, ಐಸಿಎಸ್‍ಇ 12ನೇ ತರಗತಿ ಪರೀಕ್ಷೆಯಲ್ಲೂ ಇಬ್ಬರೂ ಶೇ.96.5ರಷ್ಟು ಅಂಕಗಳನ್ನು ಗಳಿಸಿ ಅಪೂರ್ವ ಸಹೋದರರು ಎನಿಸಿದ್ದಾರೆ.  ಮುಂಬೈನ ಖಾರ್ ಪ್ರದೇಶದ ಜಸುದ್‍ಬೆನ್ ಎಂ.ಎಲ್.ಸ್ಕೂಲ್‍ನಲ್ಲಿ ಓದುತ್ತಿರುವ ಈ ಅವಳಿ ಸಹೋದರು ಮಹಾ ಪ್ರತಿಭಾವಂತರು. ಇವರಿಬ್ಬರ ನಡುವೆ ಮೊದಲಿನಿಂದಲೂ ಎಲ್ಲದರಲ್ಲೂ ಸಾಮತ್ಯೆ ಇದೆ. ಈಗ ಪರೀಕ್ಷೆಯಲ್ಲೂ ಪರಸ್ಪರ ಸಾಮ್ಯತೆಯ ಅಂಕಗಳನ್ನು ಗಳಿಸಿ ಎಲ್ಲರ ಗಮನಸೆಳೆದಿದ್ದಾರೆ. ಶೇ.96.5ರಷ್ಟು ಅಂಕಗಳನ್ನು ಗಳಿಸಿದ ರೋಹಮ್ ಮತ್ತು ರಾಹುಲ್ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮುಂದುವರಿಸಲು ನಿರ್ಧರಿಸಿದ್ದಾರೆ.

ಇವರಿಬ್ಬರು ನೋಡಲು ತದ್ರೂಪು ಹೊಂದಿರುವುದಲ್ಲದೇ ಹವ್ಯಾಸಗಳಲ್ಲೂ ಒಂದೇ ಬಗೆಯ ಆಸಕ್ತಿ ಹೊಂದಿದ್ದಾರೆ. ಮತ್ತೊಂದು ಅಚ್ಚರಿ ಸಂಗತಿ ಎಂದರೆ ಇವರಿಬ್ಬರೂ ಅನಾರೋಗ್ಯಕ್ಕೆ ಒಳಗಾಗುವುದೂ ಸಹ ಏಕಕಾಲದಲ್ಲೇ. ಇಬ್ಬರಿಗೂ ಒಂದೇ ಸಮಯಕ್ಕೆ ಹಸಿವಾಗುತ್ತದೆ. ಈಗ ರೋಹನ್ ಮತ್ತು ರಾಹುಲ್ ಸಾಮ್ಯತೆಯ ಅಂಕಗಳನ್ನು ಗಳಿಸಿರುವುದು ನಮಗೆ ಮತ್ತಷ್ಟು ಅಚ್ಚರಿ ಉಂಟು ಮಾಡಿದೆ ಎನ್ನುತ್ತಾರೆ ಈ ಅಪೂರ್ವ ಸಹೋದರರ ತಾಯಿ ಸೋನಾಲ್. ಬಾಲ್ಯದಿಂದಲೂ ಎರಡು ದೇಹ ಒಂದು ಪ್ರಾಣದಂತಿರುವ ಈ ಅವಳಿ ಸಹೋದರರು ಪ್ರತಿಭೆ ಮತ್ತು ಸಾಮ್ಯತೆಯಿಂದ ಎಲ್ಲರ ಗಮನ ಸೆಳೆದಿದ್ದರು.

Facebook Comments

Sri Raghav

Admin