ಎಸ್.ಎನ್.ನಾರಾಯಣ ಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವಂತೆ ರಕ್ತದಲ್ಲಿ ಪತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

Minister-Post

ಕೆಜಿಎಫ್,ಮೇ 21- ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಬೆಮಲ್ ಕತ್ತಿಹಳ್ಳಿಯ ಕಾಂಗ್ರೆಸ್ ಕಾರ್ಯಕರ್ತ ವಿಜಯಕೃಷ್ಣ ರಕ್ತದಲ್ಲಿ ಪತ್ರ ಬರೆದು ನಿಯೋಜಿತ ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ.  ಗ್ರಾಮದಲ್ಲಿ ಕಾರ್ಯಕರ್ತರ ಮುಂಭಾಗದಲ್ಲಿ ಕೈಯಿಂದ ಸಿರಂಜ್‍ನಲ್ಲಿ ರಕ್ತ ತೆಗೆದ ಅವರು, ಶಾಸಕರನ್ನು ಮಂತ್ರಿ ಮಾಡಬೇಕು ಎಂದು ಆಗ್ರಹಿಸಿ ಪತ್ರ ಬರೆದಿದ್ದಾರೆ. ಎಸ್.ಎನ್.ನಾರಾಯಣಸ್ವಾಮಿ ತಾಲ್ಲೂಕಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಗಾಗಿ ತಾಲ್ಲೂಕು ಹಿಂದೆಂದೂ ಕಾಣದಷ್ಟು ಅಭಿವೃದ್ಧಿಯಾಗಿದೆ. ಅವರ ಕೊಡುಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದ ಜನತೆಗೆ ಸಿಗಬೇಕಾಗಿದೆ. ಆದ್ದರಿಂದ ಅವರ ಸೇವೆಯನ್ನು ಪರಿಗಣಿಸಿ ಮಂತ್ರಿಯನ್ನಾಗಿ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ನಳಿನಿ, ಮುಖಂಡರಾದ ರೂಪ, ದೇವಿಕ, ಕಾರ್ತಿಕ್, ಶಿವರಾಜ್ ಇದ್ದರು.

Facebook Comments

Sri Raghav

Admin