ಸೆಕ್ಯೂರಿಟಿಗಾರ್ಡ್’ನನ್ನೇ ದೋಚಿದ ದರೋಡೆಕೋರರು

ಈ ಸುದ್ದಿಯನ್ನು ಶೇರ್ ಮಾಡಿ

Security--01
ಬೆಂಗಳೂರು,ಮೇ21- ಕೆಲಸ ಮುಗಿಸಿಕೊಂಡು ಸೈಕಲ್‍ನಲ್ಲಿ ಮನೆಗೆ ತೆರಳುತ್ತಿದ್ದ ಸೆಕ್ಯೂರಿಟಿಗಾರ್ಡ್‍ನ್ನು ಅಡ್ಡಗಟ್ಟಿದ ದರೋಡೆಕೋರರು, ಆತನನ್ನು ಬೆದರಿಸಿ ಎರಡು ಸಾವಿರ ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಆರ್‍ಎಂಸಿಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಾಲಕ್ಷ್ಮಿಪುರ ನಿವಾಸಿ ಸುಶಾಂತ್ ಎಂಬುವರು ಸೆಕ್ಯುರಿಟಿ ಗಾರ್ಡ್ ವೃತ್ತಿ ನೋಡುತ್ತಿದ್ದು, ರಾತ್ರಿ ಕೆಲಸ ಮುಗಿಸಿಕೊಂಡು ಸೈಕಲ್‍ನಲ್ಲಿ ಮನೆಗೆ ತೆರಳುತ್ತಿದ್ದರು.

ಮಾರಪ್ಪನ ಪಾಳ್ಯದ ಆರ್‍ಸಿ ರಾಯಲ್ ಬಳಿ ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು ಸೆಕ್ಯುರಿಟಿ ಗಾರ್ಡನ್ನು ಅಡ್ಡಗಟ್ಟಿ ಸುಶಾಂತ್ ಅವರಿಗೆ ಬೆದರಿಸಿ ಎರಡು ಸಾವಿರ ಹಣ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಆರ್‍ಎಂಸಿಯಾರ್ಡ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin