ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಆಸೆಯನ್ನು ಕತ್ತರಿಸು, ಕ್ಷಮೆಯನ್ನು ಹೊಂದು, ಮದವನ್ನು ಕೊಲ್ಲು, ಪಾಪದಲ್ಲಿ ಮನಸ್ಸಿಡಬೇಡ, ಸತ್ಯವನ್ನು ಹೇಳು, ಸಾಧು ಮಾರ್ಗವನ್ನನುಸರಿಸು, ವಿದ್ವಾಂಸರನ್ನು ಸೇವಿಸು, ಮಾನ್ಯರನ್ನು ಗೌರವಿಸು, ಶತ್ರುಗಳನ್ನು ಸಮಾಧಾನಗೊಳಿಸು, ನಿನ್ನ ಗುಣಗಳನ್ನು ಪ್ರಕಟಿಸು, ಕೀರ್ತಿಯನ್ನು ಕಾಪಾಡಿಕೋ, ನೊಂದವರಿಗೆ ದಯೆ ತೋರಿಸು- ಇವೇ ಸತ್ಪುರುಷರ ಲಕ್ಷಣ. -ನೀತಿಶತಕ

Rashi

ಪಂಚಾಂಗ : 22.05.2018 ಮಂಗಳವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.40
ಚಂದ್ರ ಉದಯ ಮ.12.31 / ಚಂದ್ರ ಅಸ್ತ ಸಂ.01.18
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಅಧಿಕ ಜ್ಯೇಷ್ಠ ಮಾಸ
ಶುಕ್ಲ ಪಕ್ಷ /ತಿಥಿ : ಅಷ್ಟಮಿ (ರಾ.08.31) / ನಕ್ಷತ್ರ: ಮಖ (ರಾ.08.28)
ಯೋಗ: ವ್ಯಾಘಾತ (ರಾ.12.46) / ಕರಣ: ಭದ್ರೆ-ಭವ (ಬೆ.09.19-ರಾ.08.31)
ಮಳೆ ನಕ್ಷತ್ರ: ಕೃತ್ತಿಕಾ / ಮಾಸ: ವೃಷಭ / ತೇದಿ: 08

ರಾಶಿ ಭವಿಷ್ಯ  :  

ಮೇಷ : ರಹಸ್ಯ ಕಾರ್ಯಾಚರಣೆ ಬಹಿರಂಗ ವಾಗುವುದು, ಸಣ್ಣ ಅಡೆತಡೆಗಳು ಬರಬಹುದು
ವೃಷಭ : ಮನಸ್ಸು ಉಲ್ಲಾಸದಿಂದಿರುವುದು, ಅವಿವಾಹಿತರಿಗೆ ವಿವಾಹವಾಗುವ ಯೋಗವಿದೆ
ಮಿಥುನ: ಸಹೋದ್ಯೋಗಿಗಳಿಂದ ಸಹಕಾರ ಸಿಗು ತ್ತದೆ, ದೂರದ ಊರಿಗೆ ಪ್ರಯಾಣ ಮಾಡುವಿರಿ
ಕಟಕ : ತಂದೆ-ತಾಯಿಯರ ವಿರೋಧ ಎದುರಿಸಬೇಕಾಗುತ್ತದೆ
ಸಿಂಹ: ಕೋಪ ಕಡಿಮೆ ಮಾಡಿ ಕೊಂಡರೆ ಬಹಳ ಉತ್ತಮ
ಕನ್ಯಾ: ರಾಜಕೀಯ ಪ್ರವೇಶ ಅನಿವಾರ್ಯವಾಗಬಹುದು
ತುಲಾ: ಕುಟುಂಬದ ಹಿರಿಯ ರೊಬ್ಬರಿಂದ ಆಸ್ತಿ ಕಲಹ ಕಂಡುಬರುವುದು
ವೃಶ್ಚಿಕ: ಆರೋಗ್ಯ ಸಮಸ್ಯೆ ಮಾನಸಿಕ ಚಿಂತೆಗೆ ಕಾರಣವಾಗಬಹುದು
ಧನುಸ್ಸು: ತಂದೆ-ತಾಯಿಯರ ಬಗ್ಗೆ ಕಾಳಜಿ ವಹಿಸಿ
ಮಕರ: ಬಂಧು-ಮಿತ್ರರಿಂದ ಆರ್ಥಿಕ ಸಹಾಯ ಪಡೆಯುವಿರಿ, ಮನೆ ದೇವರ ಪೂಜೆ ಮಾಡಿ
ಕುಂಭ: ಪುಸ್ತಕ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ
ಮೀನ: ಮಕ್ಕಳ ವಿಚಾರದಲ್ಲಿ ಅಸಮಾಧಾನ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin