ಕಡಿಮೆ ಮತಗಳ ಅಂತರದಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳು ಇವರು

ಈ ಸುದ್ದಿಯನ್ನು ಶೇರ್ ಮಾಡಿ

BJP--01

ಬೆಂಗಳೂರು, ಮೇ 22- ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ವಿಶ್ವಾಸ ಮಾತಯಾಚನೆಯಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡ ಬಿಜೆಪಿ ಸುಮಾರು 26 ಕ್ಷೇತ್ರಗಳಲ್ಲಿ ಕಡಿಮೆ ಮತಗಳ ಅಂತರದಿಂದ ಸೋತಿದೆ. ಸುಮಾರು 26 ವಿಧಾನಸಭಾ ಕ್ಷೇತ್ರಗಳಲ್ಲಿ 6 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿರುವುದೇ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ.
ಮಿಷನ್ 150 ಎಂದು ಹೇಳುತ್ತಿದ್ದ ಬಿಜೆಪಿ ನಾಯಕರು ತಮ್ಮ ಲೆಕ್ಕಚಾರದಂತೆಯೇ ಕಾರ್ಯತಂತ್ರ ರೂಪಿಸಿ ಸುಮಾರು 125 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ಹಿಡಿಯುವ ಗುರಿ ಇಟ್ಟುಕೊಂಡಿತ್ತು.

ಆ ಪ್ರಕಾರವೇ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ನಡೆಸಿ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳದೆ ಅಧಿಕಾರ ಹಿಡಿಯಲು ಬಿಜೆಪಿ ಕಾರ್ಯತಂತ್ರ ರೂಪಿಸಿತ್ತು. ಅಂದುಕೊಂಡಂತೆ ಗೆದ್ದಿದ್ದರೆ ರಾಜ್ಯದಲ್ಲಿ ಎರಡನೆ ಬಾರಿ ಅಧಿಕಾರ ಹಿಡಿಯುವ ಸಾಧ್ಯತೆ ಇತ್ತು. ಆದರೆ, ರಾಜ್ಯದ ಮತದಾರ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹಮತ ನೀಡದೆ ಅತಂತ್ರ ಫಲಿತಾಂಶ ಬಂದಿದೆ. ಕಡಿಮೆ ಮತಗಳ ಅಂತರದಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ.
ಮಸ್ಕಿ – 213
ಹಿರೇಕೇರೂರು- 555
ಕುಂದಗೋಳ- 634
ಯಲ್ಲಾಪುರ -1483
ಗದಗ -1868
ಶ್ರಂಗೇರಿ- 1989
ಅಥಣಿ -2331
ವಿಜಯನಗರ- 2775
ಜಮಖಂಡಿ- 2795
ಯಮಕನಮರಡಿ- 2850
ಬಳ್ಳಾರಿ- 2850
ಹನೂರು -3513
ದಾವಣಗೆರೆ ಉತ್ತರ- 4071
ಚಿತ್ತಾಪುರ- 4393
ಬೀಳಗಿ -4811
ಚಾಮರಾಗನಗರ- 4913
ಸಕಲೇಶಪುರ – 4942
ಖಾನಪುರ- 5133
ಹಳಿಯಾಳ- 5140
ಕಂಪ್ಲಿ -5600
ತುಮಕೂರು ಗ್ರಾ. -5640
ಬ್ಯಾಟರಾಯನಪುರ- 5671
ಚಿಂತಾಮಣಿ -5673
ಭಟ್ಕಳ -5930
ಕಲಬುರಗಿ ಉತ್ತರ -5940

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin