ಕುತೂಹಲ ಕೆರಳಿಸಿದ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಹೇಳಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

Muralidhar-Rao

ಬೆಂಗಳೂರು, ಮೇ 22- ನಾಳೆಯು ಇದೆ ನಾಡಿದ್ದು ಇದೆ ಕಾದು ನೋಡೂಣ ಎನಾಗುತ್ತದೆಯೋ ಎಂದು ಕಾದು ನೋಡಿ … ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಹೀಗೆ ಹೇಳುವ ನೂಲಕ ಕುತೂಹಲವನ್ನು ಕೇರಳಿಸಿದ್ದಾರೆ ಧವಳಗಿರಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿಜೆಪಿ ಯಡಿಯೂರಪ್ಪರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.  ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುರಳಿಧರ ರಾವ ನಾಳೆಯು ಇದೆ ನಾಡಿದ್ದು ಇದೆ ಮುಂದೆನಾಗುತ್ತದೆಯೋ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದರು ಮುರುಳಿಧರ ರಾವ್ ಅವರು ಹೇಳಿದ್ದಾರೆ. ಅವರ ಈ ಹೇಳಿಕೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ನಾಳೆ ಮುಖ್ಯಮಂತ್ರಿಯಾಗಿ ಜೆಡಿಎಸ್ ಎಚ್.ಡಿ. ಕುಮಾರಸ್ವಾಮಿಯವರು ಅಧಿಕಾರ ಸ್ವೀಕರಸಲಿದ್ದಾರೆ.

ಅಧಿಕಾರ ಸ್ವೀಕರಿಸಿದ ಬಳಿಕ ಅವರು ವಿಧಾಸಭೆಯಲ್ಲಿ ಬಹುಮತ ಸರಳ ಬಹುಮತಕ್ಕೆ ನೂರಾ ಹನ್ನೆರಡು ಸದಸ್ಯರ ಬೆಂಬಲಬೇಕು ಸದ್ಯಕ್ಕೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಹಾಗೂ ಇಬ್ಬರು ಬೆಂಬಲದಿಂದ ನೂರಾ ಹದಿನೆಂಟು ಶಾಸಕರ ಬೆಂಬಲವಿದೆ. ಈ ನಡುವೆ ಮುರಳಿಧರ ರಾವ್ ಇಂದು ನೀಡಿರುವ ಹೇಳಿಕೆ ಆಪರೇಷನ್ ಕಮಲಕ್ಕೆ ಬಿಜೆಪಿ ಮತ್ತೆ ಕೈ ಹಾಕಲಿದೆ ಎಂಬ ಪ್ರಶ್ನೆ ಎದುರಾಗಿದೆ.

Facebook Comments

Sri Raghav

Admin