ಥ್ರಿಲ್ ನೀಡುವ ಕಾರ್ ಜಂಪಿಂಗ್ ಚಾಂಪಿಯನ್’ಶಿಪ್ಸ್ ಬಗ್ಗೆ ನೀವೂ ತಿಳಿಯಿರಿ..!

ಈ ಸುದ್ದಿಯನ್ನು ಶೇರ್ ಮಾಡಿ

DS-1
ಇಂಗ್ಲೆಂಡ್ ಭಿನ್ನ-ವಿಭಿನ್ನ ಸ್ಪರ್ಧೆಗಳ ತವರೂರು. ಸದಾ ಅಲ್ಲಿ ಒಂದಿಲ್ಲೊಂದು ಸ್ಪರ್ಧೆ-ಪೈಪೋಟಿಗಳು ನಡೆಯುತ್ತಲೇ ಇರುತ್ತವೆ. ಇಂಥ ರೋಚಕ ಪಂದ್ಯಗಳಲ್ಲಿ ಕಾರ್ ಜಪ್ಪಿಂಗ್ ಚಾಂಪಿಯನ್‍ಶಿಪ್ಸ್ ಕೂಡ ಒಂದು…!

ಯುನೈಟೆಡ್ ಕಿಂಗ್‍ಡಂನ ವೆಸ್ಟ್ ಸುಸ್ಸೆಕ್ಸ್‍ನ ಅಂಗ್‍ಮೆರಿಂಗ್‍ನಲ್ಲಿ ನಡೆದ ಕಾರ್ ಜಪ್ಪಿಂಗ್ ಚಾಂಪಿಯನ್‍ಶಿಪ್ ರೋಚಕವಾಗಿತ್ತು.
ಸ್ಪರ್ಧೆ ವೇಳೆ ಕಾರುಗಳು ನೋಸ್ ಡೈವ್ ಮಾಡಿದರೂ ಯಾವ ಚಾಲಕರಿಗೂ ಅನಾಹುತಗಳಾಗಲಿಲ್ಲ. ಕಾರುಗಳು ಜಿಗಿಯುವ ವೇಳೆ ಅಪಘಾತಕ್ಕೀಡಾದರೂ ಅದು ಆರೋಗ್ಯಕರವಾಗಿತ್ತು.

DS

ಸ್ಥಳೀಯ ರೇಸ್‍ವೇನಲ್ಲಿ ಹಳೆಯ ಕಾರುಗಳು ಮತ್ತು ಪರಾಭವಗೊಂಡ ಕಾರುಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ ಅಡ್ಡಲಾಗಿ ನಿಲ್ಲಿಸಲಾಗಿತ್ತು. ಕಾರುಗಳು ಇವುಗಳ ಮೇಲೆ ಜಂಪ್ ಮಾಡಿ ದೂರ ಕ್ರಮಿಸಬೇಕೆಂಬುದು ಸ್ಪರ್ಧೆಯ ನಿಯಮವಾಗಿತ್ತು. ನಿಕ್ ವಾರ್ಡರ್ ವಿಜೇತರಾದರು. ತಮ್ಮ ಹಳೆ ಆಡಿ ಕಾರನ್ನು ಯಶಸ್ವಿಯಾಗಿ ಜಂಪ್ ಮಾಡಿಸಿದ ಅವರು ಜಿಬಿಪಿ 50 ಬಹುಮಾನ ಗೆದ್ದರು.

Facebook Comments