ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಎಲೈ ಮನಸ್ಸೇ, ಈ ಆಯಾಸವನ್ನು ಕೊಡುವ ವಿಷಯ ಸುಖವೆಂಬ ಕಾಡಿನಿಂದ ನಿವೃತ್ತನಾಗು. ಎಲ್ಲಾ ದುಃಖಗಳನ್ನೂ ಉಪಶಮನ ಮಾಡುವುದರಲ್ಲಿ ಸಮರ್ಥವಾದ, ಶಾಂತವಾದ ಶ್ರೇಯಸ್ಸಿನ ದಾರಿಯನ್ನು ಕ್ಷಣಕಾಲ ಹೊಂದು. ಅಲೆಗಳಂತೆ ಚಂಚಲವಾದ ನಿನ್ನ ಬುದ್ಧಿಯನ್ನು ಬಿಡು. ಈಗಲೇ ಪ್ರಸನ್ನತೆಯನ್ನು ಹೊಂದು; ಮತ್ತೆ ಸಂಸಾರದಲ್ಲಿ ಆಸೆಯನ್ನಿಟ್ಟು ಕೊಳ್ಳಬೇಡ. -ವೈರಾಗ್ಯಶತಕ

Rashi

ಪಂಚಾಂಗ : 23.05.2018 ಬುಧವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.40
ಚಂದ್ರ ಉದಯ ಮ.01.27 / ಚಂದ್ರ ಅಸ್ತ ಸಂ.02.03
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ : ನವಮಿ (ರಾ.07.13)
ನಕ್ಷತ್ರ: ಪೂರ್ವಫಲ್ಗುಣಿ (ರಾ.07.55) / ಯೋಗ: ಹರ್ಷಣ (ರಾ.10.44)
ಕರಣ: ಬಾಲವ-ಕೌಲವ (ಬೆ.07.49-ರಾ.07.13) / ಮಳೆ ನಕ್ಷತ್ರ: ಕೃತ್ತಿಕಾ
ಮಾಸ: ವೃಷಭ / ತೇದಿ: 09

ರಾಶಿ ಭವಿಷ್ಯ  :  

ಮೇಷ : ವಿದ್ವಾಂಸರ ಸಂಪರ್ಕದಿಂದ ವಿಶೇಷ ಸನ್ಮಾನ ಸಿಗಲಿದೆ, ಅಧಿಕ ಲಾಭವಾಗಲಿದೆ
ವೃಷಭ : ಮಾನಸಿಕ ಚಿಂತೆಯಿಂದ ದಾರಿ ತೋರದೆ ಹಿರಿಯರ ಸಹಾಯ ಪಡೆಯುವಿರಿ
ಮಿಥುನ: ಕುಟುಂಬದಲ್ಲಿ ಕಲಹ ಉಂಟಾಗಲಿದೆ, ಬಂಧುಗಳು ದೂರ ಸರಿಯುವರು
ಕಟಕ : ಮನೆಯಲ್ಲಿ ನೆಮ್ಮದಿ ವಾತಾವರಣವಿರುತ್ತದೆ
ಸಿಂಹ: ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ
ಕನ್ಯಾ: ಎಲ್ಲರಿಗೂ ನಿಮ್ಮ ಸಲಹೆ-ಸೂಚನೆ ಅತ್ಯಗತ್ಯವಿರುತ್ತದೆ
ತುಲಾ: ಹಿತ ಶತ್ರುಗಳಿಂದ ಮನಸ್ಸಿಗೆ ಬೇಸರವಾಗುತ್ತದೆ
ವೃಶ್ಚಿಕ: ಶುಭ ಕಾರ್ಯಗಳು ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಡುತ್ತವೆ
ಧನುಸ್ಸು: ಸಂಕಷ್ಟದ ಪರಿಸ್ಥಿತಿ ನಿವಾರಿಸಿಕೊಳ್ಳುವಿರಿ
ಮಕರ: ಗೆಳತಿಯರಿಂದ ಸಹಾಯ ಪಡೆಯುತ್ತೀರಿ
ಕುಂಭ: ದಾಂಪತ್ಯ ಜೀವನ ಸುಖಮಯವಾಗಿರುವುದು
ಮೀನ: ಆಸ್ತಿ ಕೈ ತಪ್ಪಿ ಹೋಗಬಹುದು

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin