ಏಪ್ರಿಲ್ ತಿಂಗಳೊಂದರಲ್ಲೇ ಮೈಸೂರು ಅರಮನೆ ವೀಕ್ಷಿಸಿದ 3.7 ಲಕ್ಷ ಮಂದಿ ಪ್ರವಾಸಿಗರು
ಮೈಸೂರು, ಮೇ 23- ಬೇಸಿಗೆ ರಜೆ ಹಿನ್ನೆಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಪ್ರವಾಸಿಗರು ದಾಖಲೆಯ ಸಂಖ್ಯೆಯಲ್ಲಿ ಮೈಸೂರಿಗೆ ಆಗಮಿಸಿದ್ದರು. ಏಪ್ರಿಲ್ನಲ್ಲಿ ಮೈಸೂರು ಅರಮನೆಯಲ್ಲಿ 3.7 ಲಕ್ಷ ಮಂದಿ ವೀಕ್ಷಿಸಿರುವುದು ದಾಖಲೆಯಾಗಿದೆ. ಇವರಲ್ಲಿ 2.63 ಲಕ್ಷ ಮಂದಿ ವಯಸ್ಕರು, 2,557 ಮಂದಿ ವಿದೇಶಿಗರು, 6,963 ಮಂದಿ ವಿದ್ಯಾರ್ಥಿಗಳು ಹಾಗೂ 34,612 ಮಂದಿ ಮಕ್ಕಳು ಮೈಸೂರು ಅರಮನೆ ವೀಕ್ಷಿಸಿದ್ದಾರೆ. ಮೇ ತಿಂಗಳಿನಲ್ಲಿ ಇದುವರೆಗೂ 3.11 ಲಕ್ಷ ಮಂದಿ ಮೈಸೂರು ಅರಮನೆ ವೀಕ್ಷಿಸಿದ್ದಾರೆ.
Facebook Comments