ನೂತನ ಸಿಎಂ ಕುಮಾರಸ್ವಾಮಿಯವರಿಗೆ ಶುಭಕೋರಿದ ಪಿಎಂ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy------0114

ಬೆಂಗಳೂರು, ಮೇ 23: ಇಂದು 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಶುಭಾಶಯ ಕೋರಿದರು. ಅಷ್ಟೇ ಅಲ್ಲದೆ  ನಂತರ ಕುಮಾರಸ್ವಾಮಿಯವರಿಗೆ ದೂರವಾಣಿ ಕರೆ ಮಾಡಿ 5 ನಿಮಿಷಕ್ಕೂ ಹೆಚ್ಚುಕಾಲ ಅವರೊಂದಿಗೆ ಮಾತನಾಡಿ ಶುಭಾಶಯ ಕೋರಿದರು.

ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಆಶಯವನ್ನು ಮೋದಿ  ವ್ಯಕ್ತಪಡಿಸಿದರು ಎನ್ನಲಾಗಿದೆ. ಉಪಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪರಮೇಶ್ವರ್‌ ಅವರಿಗೂ ವಿಶ್ ಮಾಡಿರುವ ಪ್ರಧಾನಿ ಅವರು, ಇಬ್ಬರಿಗೂ ಪ್ರಮಾಣ ವಚನ ದಿನದ ಶುಭಾಷಯಗಳು, ನಿಮ್ಮಿಬ್ಬರ ಮುಂದಿನ ಅಧಿಕಾರಾವಧಿ ಫಲಪ್ರಧವಾಗಿರಲಿ ಎಂದು ಹಾರೈಸಿದ್ದಾರೆ.

ಜನಾದೇಶಕ್ಕೆ ವಿರುದ್ಧವಾಗಿ ಕಾಂಗ್ರೆಸ್-ಜೆಡಿಎಸ್ ಪಕ್ಷ ಸರ್ಕಾರ ರಚಿಸುತ್ತಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿಯು ಇಂದಿನ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದ್ದು, ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆಯನ್ನು ಮಾಡಿದೆ. ಇನ್ನು ಪ್ರಮಾಣವಚನ ಕಾರ್ಯಕ್ರಮಕ್ಕೆ ಯಾವೊಬ್ಬ ಬಿಜೆಪಿ ನಾಯಕರೂ ಬಂದಿರಲಿಲ್ಲ. ಆದರೆ ಪ್ರಧಾನಿ ಮೋದಿ ಮಾತ್ರ ಎಂದಿನಂತೆ ಹೊಸ ಮುಖ್ಯಮಂತ್ರಿಗೆ ಶುಭಾಶಯ ಕೋರುವುದನ್ನು ಮರೆಯಲಿಲ್ಲ.

Facebook Comments

Sri Raghav

Admin