“ಲೀಟರ್ ಗೆ 25 ರೂ. ಲಾಭ ಬಂದರೂ 25ಪೈಸೆ ಪೆಟ್ರೋಲ್ ದರ ಇಳಿಸಲು ಕೇಂದ್ರಕ್ಕೆ ಮನಸಿಲ್ಲ”

ಈ ಸುದ್ದಿಯನ್ನು ಶೇರ್ ಮಾಡಿ

Chidambaram--02

ನವದೆಹಲಿ, ಮೇ 23- ಸತತ ಒಂಭತ್ತು ದಿನಗಳಿಂದ ಪೆಟ್ರೋಲ್ ದರ ಏರಿಕೆಯಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರಕ್ಕೆ ಪ್ರತಿ ಲೀಟರ್ 25 ರೂಪಾಯಿ ಲಾಭ ಬಂದರೂ 25 ಪೈಸೆಗಳಷ್ಟು ಬೆಲೆ ಇಳಿಸಲು ಕೇಂದ್ರಕ್ಕೆ ಮನಸ್ಸಿಲ್ಲ ಎಂದು ಟೀಕಿಸಿದ್ದಾರೆ.  ಈ ಕುರಿತು ಸರಣಿ ಟ್ವಿಟ್ ಮಾಡಿರುವ ಚಿದು, ಪ್ರತಿ ಲೀಟರ್ ಪೆಟ್ರೋಲ್‍ಗೆ 25 ರೂ.ಗಳಂತೆ ಕೇಂದ್ರ ಸರ್ಕಾರಕ್ಕೆ ಭರ್ಜರಿ ಹಣ ಸಂದಾಯವಾಗುತ್ತಿದೆ. ಗ್ರಾಹಕರ ಪರಿಶ್ರಮದ ಹಣ ನಿರಾಯಾಸವಾಗಿ ಕೇಂದ್ರದ ಪಾಲಾಗುತ್ತಿದೆ ಎಂದು ಆರೋಪಿಸಿದರು. ಕಚ್ಚಾ ತೈಲ ಬೆಲೆಗಳ ಕುಸಿತದಿಂದಾಗಿ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 15 ರೂ.ಗಳನ್ನು ಉಳಿಸುತ್ತಿದೆ. ಇನ್ನೊಂದೆಡೆ ಲೀಟರ್ ಒಂದಕ್ಕೆ 10 ರೂ.ಗಳ ಹೆಚ್ಚುವರಿ ತೆರಿಗೆ ಹೊರೆ ಹಾಕುತ್ತಿದೆ ಎಂದು ಅವರು ದೂರಿದರು.

Facebook Comments

Sri Raghav

Admin