ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-05-2018)
ನಿತ್ಯ ನೀತಿ : ಅದೇ ರಾತ್ರಿ, ಅದೇ ಹಗಲು ಮತ್ತೆ ಮತ್ತೆ ಬಂದಿದೆ ಎಂದು ತಿಳಿದೂ ಪ್ರಾಣಿಗಳು ತಮ್ಮ ತಮ್ಮ ಆಯಾ ಉದ್ಯಮಗಳಲ್ಲಿ ತೊಡಗಿ, ಇತರರಿಗೆ ತಿಳಿಯದಂತೆ ತಾವು ಆರಂಭಿಸಿದ ಆಯಾ ಕಾರ್ಯಗಳನ್ನು ಮುಂದುವರಿಸಿ, ಹಿಂದೆ ಅನುಭವಿಸಿದ ಅದೇ ವಿಷಯಗಳ ಸುಖಕ್ಕಾಗಿ ವ್ಯರ್ಥವಾಗಿ ಧಾವಿಸುತ್ತಾರೆ. ಈ ವಿಧವಾದ ಸಂಸಾರ ನಿರರ್ಥಕವಾದುದು. ಆದರೂ ಅಜ್ಞಾನದ ಕಾರಣ ನಾಚಿಕೆ ಪಡುವುದಿಲ್ಲವಲ್ಲಾ..! ಏನಾಶ್ಚರ್ಯ..! -ವೈರಾಗ್ಯಶತಕ
ಪಂಚಾಂಗ : 24.05.2018 ಗುರುವಾರ
ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.40
ಚಂದ್ರ ಉದಯ ಮ.02.20 / ಚಂದ್ರ ಅಸ್ತ ಸಂ.02.46
ವಿಲಂಬಿ ಸಂವತ್ಸರ / ಉತ್ತರಾಯಣ ಗ್ರೀಷ್ಮ ಋತು / ಅಧಿಕ ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ : ದಶಮಿ (ಸಾ.06.18) / ನಕ್ಷತ್ರ: ಉತ್ತರಫಲ್ಗುಣಿ (ರಾ.07.45)
ಯೋಗ: ವಜ್ರ (ರಾ.09.00)/ ಕರಣ: ತೈತಿಲ-ಗರಜೆ (ಬೆ.06.43-ಸಾ.06.18)
ಮಳೆ ನಕ್ಷತ್ರ: ಕೃತ್ತಿಕಾ / ಮಾಸ: ವೃಷಭ / ತೇದಿ: 10
ರಾಶಿ ಭವಿಷ್ಯ :
ಮೇಷ : ಅಧಿಕಾರಿಗಳಿಂದ ಅತೃಪ್ತಿ ಉಂಟಾಗಬಹುದು
ವೃಷಭ : ಮುಖ್ಯ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ, ಅನಾವಶ್ಯಕ ಪ್ರಯಾಣ ಮಾಡುವಿರಿ
ಮಿಥುನ: ದಾಂಪತ್ಯದಲ್ಲಿ ವಿರಸ ಉಂಟಾಗಲಿದೆ
ಕಟಕ : ಅವಶ್ಯಕ ವಸ್ತುಗಳ ಖರೀದಿಯಿಂದ ಸಂತೋಷ ವಾಗುತ್ತದೆ, ಹೊಸ ಮಿತ್ರರು ದೊರಕುವರು
ಸಿಂಹ: ಕಠೋರವಾದ ಮಾತು ಗಳಿಂದ ಕೆಲಸ-ಕಾರ್ಯಗಳಲ್ಲಿ ವಿಘ್ನ ಉಂಟಾಗಲಿದೆ
ಕನ್ಯಾ: ನೀವು ಬಯಸಿದ ಹಣ ಸೂಕ್ತ ಸಮಯದಲ್ಲಿ ಕೈ ಸೇರದೆ ತೊಂದರೆ ಅನುಭವಿಸುವಿರಿ
ತುಲಾ: ಬಹಳ ದಿನಗಳಿಂದ ನಡೆಯಬೇಕಿದ್ದ ಶುಭ ಕಾರ್ಯಗಳು ನೆರವೇರುತ್ತವೆ
ವೃಶ್ಚಿಕ: ಪತ್ನಿ ಮತ್ತು ಮಕ್ಕಳ ಆರೋಗ್ಯದಲ್ಲಿ ತುಸು ಬದಲಾವಣೆ ಕಾಣಬಹುದು
ಧನುಸ್ಸು: ಜವಾಬ್ದಾರಿಯುತ ಕೆಲಸ ಮಾಡುವಿರಿ
ಮಕರ: ಕುಟುಂಬದಲ್ಲಿ ಉತ್ತಮ ವಾತಾವರಣ ವಿರುತ್ತದೆ, ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ
ಕುಂಭ: ಪಾಲುದಾರರೊಡನೆ ಎಚ್ಚರಿಕೆಯಿಂದ ವ್ಯವಹರಿಸಿ
ಮೀನ: ಸಾಲಗಾರರಿಂದ ಮುಕ್ತಿ ದೊರೆಯುತ್ತದೆ
+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS