ಐಒಸಿಎಲ್’ನಲ್ಲಿ ಕರ್ನಾಟಕದವರಿಗೆ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

IOCL-JOBS

ಭಾರತೀಯ ತೈಲ ನಿಗಮ ನಿಯಮಿತ (ಐಒಸಿಎಲ್) ದ ಮಾರುಕಟ್ಟೆ ವಿಭಾಗದಲ್ಲಿ ಜೂನಿಯರ್ ಆಪರೇಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 58
ಹುದ್ದೆಗಳ ವಿವರ

1.ಜೂನಿಯರ್ ಆಪರೇಟರ್ – 25
2.ಜೂನಿಯರ್ ಆಪರೇಟರ್ (ಏವಿಯೇಷನ್) – 33
ದಕ್ಷಿಣ ಪ್ರಾಂತ್ಯದ ರಾಜ್ಯವಾರು ಹುದ್ದೆಗಳ ಸಂಖ್ಯೆ
ಕ್ರ.ಸಂ 1ರ ಹುದ್ದೆಗೆ
ಆಂಧ್ರಪ್ರದೇಶ – 04
ತೆಲಂಗಾಣ – 03
ಕರ್ನಾಟಕ – 10
ಕೇರಳ – 01
ತಮಿಳುನಾಡು ಮತ್ತು ಪಾಂಡಿಚರಿ – 07
ಕ್ರ.ಸಂ 2ರ ಹುದ್ದೆಗೆ
ಆಂಧ್ರಪ್ರದೇಶ – 01
ತೆಲಂಗಾಣ – 02
ಕರ್ನಾಟಕ – 06
ಕೇರಳ – 01
ತಮಿಳುನಾಡು ಮತ್ತು ಪಾಂಡಿಚರಿ – 23
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಮೆಟ್ರಿಕ್ ಶಿಕ್ಷಣದ ಜೊತೆಗೆ ಐಟಿಐ ಪಡೆದಿರಬೇಕು. ಕ್ರ.ಸಂ 2ರ ಹುದ್ದೆಗೆ ಪದವಿ ಪೂರ್ವ ಶಿಕ್ಷಣ ಪಡೆದಿರಬೇಕು.
ವಯೋಮಿತಿ : ಕನಿಷ್ಠ 18, ಗರಿಷ್ಠ 25 ವರ್ಷ ವಯೋಮಿತಿ ನಿಗದಿಮಾಡಲಾಗಿದೆ. ಮಯೋಮಿತಿಯಲ್ಲಿ ಮೀಸಲಾತಿ ಪೆಡೆಯುವ ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ,ಪ.ಪಂ ದವರಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-06-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.iocl.com ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin