ಸಚಿವ ಸ್ಥಾನಕ್ಕಾಗಿ ಯಾರನ್ನೂ ಕೇಳಿಲ್ಲ : ಶಾಸಕ ಜಮೀರ್

ಈ ಸುದ್ದಿಯನ್ನು ಶೇರ್ ಮಾಡಿ

Jameer-Ahamd-Khan
ಬೆಂಗಳೂರು, ಮೇ 24- ಸಚಿವ ಸ್ಥಾನ ನೀಡಬೇಕೆಂದು ನಾನು ಯಾರ ಬಳಿಯೂ ಕೇಳಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್‍ಖಾನ್ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕೊಡಬೇಕೆಂದು ಯಾರ ಬಳಿಯೂ ನಾನು ಕೇಳಿಕೊಂಡಿಲ್ಲ. ನನ್ನ ಅಗತ್ಯ ಇದೆ ಎಂದರೆ ಪಕ್ಷದ ನಾಯಕರೇ ಇದನ್ನು ತೀರ್ಮಾನಿಸುತ್ತಾರೆ ಎಂದು ಹೇಳಿದರು. ಒಂದು ವೇಳೆ ನಮ್ಮ ಪಕ್ಷ ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ. ಆದರೆ, ಯಾರನ್ನೂ, ಏನನ್ನೂ ಕೇಳಿಲ್ಲ. ದೇವರ ಬಳಿಯಷ್ಟೇ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.

Facebook Comments

Sri Raghav

Admin