ಸಾರ್ವಜನಿಕರಿಂದ ಹತ್ಯೆಯಾದ ಕಾಲುರಾಮ್ ಅಮಾಯಕನೇ..?

ಈ ಸುದ್ದಿಯನ್ನು ಶೇರ್ ಮಾಡಿ

Kaluram

ಬೆಂಗಳೂರು, ಮೇ 24- ನಡು ರಸ್ತೆಯಲ್ಲೇ ಸಾರ್ವಜನಿಕರಿಂದ ಭೀಕರವಾಗಿ ಹತ್ಯೆಯಾದ ರಾಜಸ್ತಾನ ಮೂಲದ ಕಾಲುರಾಮ್ (26) ಮಕ್ಕಳ ಕಳ್ಳನೇ ಅಥವಾ ಅಮಾಯಕನೇ ಎಂಬುದರ ಬಗ್ಗೆ ಚಾಮರಾಜಪೇಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾಲೂರಾಮ್ ಮೂಲತಃ ರಾಜಸ್ತಾನದವನಾಗಿದ್ದು , ಈತನಿಗೆ ತಂದೆ -ತಾಯಿ ಇಲ್ಲ. ಒಬ್ಬ ತಮ್ಮ ರಾಜಸ್ತಾನದಲ್ಲಿದ್ದಾನೆ ಎಂಬುದು ಇದುವರೆಗಿನ ತನಿಖೆಯಿಂದ ತಿಳಿದು ಬಂದಿದೆ. ಈ ಹಿಂದೆ ಈತ ಪೂನಾ ಮತ್ತು ಗುಜರಾತ್‍ನಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಬೆಂಗಳೂರು ನಗರಕ್ಕೆ ಈತ ಯಾವಾಗ ಬಂದ. ಎಲ್ಲಿ ವಾಸವಾಗಿದ್ದ. ಇಲ್ಲಿ ಯಾವ ಕೆಲಸ ಮಾಡುತ್ತಿದ್ದ ಎಂಬುದರ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಚಾಮರಾಜಪೇಟೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾಲೂರಾಮ್ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿಡಲಾಗಿದೆ. ಬೆಂಗಳೂರಿನಲ್ಲಿರುವ ರಾಜಸ್ತಾನದ ಕೆಲವು ವ್ಯಕ್ತಿಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಲಾಗಿದೆ. ರಾಜಸ್ತಾನಕ್ಕೂ ಒಂದು ಪೊಲೀಸ್ ತಂಡ ಹೋಗಿದ್ದು , ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Facebook Comments

Sri Raghav

Admin