ಕೆನಡಾದ ಭಾರತೀಯ ರೆಸ್ಟೋರೆಂಟ್‍ನಲ್ಲಿ ಸ್ಫೋಟ : ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Bombay--01

ಟೊರೊಂಟೊ, ಮೇ 25-ಕೆನಡಾದ ಅತಿದೊಡ್ಡ ನಗರಿ ಟೊರೊಂಟೋದ ಮಿಸ್ಸಿಸ್ಸೌಗಾದಲ್ಲಿನ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ನಿನ್ನೆ ರಾತ್ರಿ ಸ್ಪೋಟ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಬಾಂಬೆ ಬೇಲ್ ಹೆಸರಿನ ರೆಸ್ಟೋರೆಂಟ್‍ನಲ್ಲಿ ರಾತ್ರಿ 10.30ರಲ್ಲಿ ಈ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಚಿಂತಾಜನಿಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಕಳೆದ ತಿಂಗಳು ಚಾಲಕನೊಬ್ಬ ಬಾಡಿಗೆ ವ್ಯಾನೊಂದನ್ನು ಜನರು ಗುಂಪಿನತ್ತ ನುಗ್ಗಿಸಿ 10 ಜನರನ್ನು ಬಲಿಪಡೆದು, ಇತರ 15 ಮಂದಿಯನ್ನು ಗಾಯಗೊಳಿಸಿದ ನಂತರ ಈ ಘಟನೆ ನಡೆದಿದ್ದು, ಜನರು ಭಯಭೀತರಾಗಿದ್ದಾರೆ.

Facebook Comments

Sri Raghav

Admin