ಮೈಸೂರಿನಿಂದ ತಿರುಪತಿಗೆ ತೆರಳುವವರಿಗೆ ಇಲ್ಲಿದೆ ಸಿಹಿಸುದ್ದಿ

ಈ ಸುದ್ದಿಯನ್ನು ಶೇರ್ ಮಾಡಿ

Tirupaty--01

ಮೈಸೂರು,ಮೇ 25- ತಿರುಪತಿಗೆ ಮೈಸೂರಿನಿಂದ ತೆರಳುವವರಿಗಾಗಿ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಮೈಸೂರಿನಿಂದ ತಿರುಪತಿ ಸಮೀಪ ರೇನುಗುಂಟವರೆಗಿನ ಮಾರ್ಗದಲ್ಲಿ ನೂತನ ರೈಲು ಆರಂಭಿಸಲಾಗಿದೆ. ನಾಳೆಯಿಂದ ಮೈಸೂರು-ರೇನುಗುಂಟಾ ರೈಲು ಸಂಚಾರ ಆರಂಭಿಸಲಿದೆ. ಪ್ರತಿ ವಾರಕ್ಕೊಮ್ಮೆ ಮೈಸೂರಿನಿಂದ ಈ ರೈಲು ಸಂಚರಿಸಲಿದೆ.

ತಿರುಪತಿಗೆ ತೆರಳುವವರಿಗೆ ಇದರಿಂದ ಅನುಕೂಲವಾಗಲಿದೆ. ತಿರುಪತಿಗೆ 10 ಕಿ.ಮೀ ದೂರದಲ್ಲಿರುವ ರೈಲು ನಿಲುಗಡೆಯಾಗಲಿದೆ ಜೊತೆಗೆ ಮೈಸೂರು ಭಾಗದಿಂದ ಹೆಚ್ಚಿನ ಜನರು ತೆರಳುವ ಹಿನ್ನೆಲೆಯಲ್ಲಿ ಈ ನೂತನ ರೈಲು ಕೊಡುಗೆ ಎನ್ನಬಹುದು. ಹೊಸ ರೈಲು ಪ್ರತಿ ಶನಿವಾರ ರಾತ್ರಿ 10.55ಕ್ಕೆ ಮೈಸೂರಿನಿಂದ ಹೊರಡುತ್ತದೆ. ಭಾನುವಾರ ಬೆಳಗ್ಗೆ 8.15ಕ್ಕೆ ರೇನುಗುಂಟಾ ನಿಲ್ದಾಣ ತಲುಪುತ್ತದೆ. ಶನಿವಾರ ಸಂಜೆ 5.20ಕ್ಕೆ ಹೊರಟು ಮೈಸೂರಿಗೆ ಭಾನುವಾರ ಮಧ್ಯಾಹ್ನ 3.15ಕ್ಕೆ ಬರುತ್ತದೆ . ತಿರುಪತಿಗೆ ಪ್ರವಾಸ ಹೋಗುವವರ ಸಂಖ್ಯೆ ಹೆಚ್ಚಿರುವುದರಿಂದ ವಾರದ ರಜೆ ದಿನಗಳಲ್ಲಿ ಈ ರೈಲು ಓಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin