ರಮೇಶ್‍ಕುಮಾರ್ ಸಭಾಧ್ಯಕ್ಷರಾಗಿರುವುದಕ್ಕೆ, ಸುರೇಶ ಕುಮಾರ್ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

suresh-ramesh

ಬೆಂಗಳೂರು, ಮೇ 25-ವಿಧಾನಸಭಾಧ್ಯಕ್ಷರಾಗಿ ಕೆ.ಆರ್.ರಮೇಶ್ ಕುಮಾರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿರುವುದು ನಮ್ಮ ಮನಸ್ಸಿಗೆ ನಿರಾಳ ತಂದಿದೆ ಎಂದು ಬಿಜೆಪಿಯ ಶಾಸಕ ಸುರೇಶ್‍ಕುಮಾರ್ ತಿಳಿಸಿದರು. ಸಭಾಧ್ಯಕ್ಷರಾಗಿ ರಮೇಶ್‍ಕುಮಾರ್ ಆಯ್ಕೆಯಾದ ನಂತರ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಕಳೆದ 48 ಗಂಟೆಯಿಂದ ವಿಚಿತ್ರ ಮನಸ್ಥಿತಿ ನನ್ನಲ್ಲಿತ್ತು. ರಮೇಶ್‍ಕುಮಾರ್ ಅವರು ಸಭಾಧ್ಯಕ್ಷರಾಗಿರುವುದರಿಂದ ಮನಸ್ಸು ನಿರಾಳವಾಗಿದೆ. ಅಲ್ಲದೆ, ನನ್ನ ವಿರುದ್ಧ ಮತ ಹಾಕುವ ಮುಜುಗರವನ್ನು ತಪ್ಪಿಸಿದ್ದೀರಿ ಎಂದು ರಮೇಶ್‍ಕುಮಾರ್ ಹೇಳಿದ್ದು, ಇನ್ನಷ್ಟು ನಿರಾಳ ಮಾಡಿದೆ.
ಈ ಹಿಂದೆ ಸಭಾಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಣೆ ಮಾಡಿದ್ದರು. ಉತ್ತಮ ವಕೀಲರಾಗಿದ್ದಿರಿ. ಸಭಾಧ್ಯಕ್ಷರಾಗಿದ್ದ ಅವಧಿಯಲ್ಲಿ ಸದನದಲ್ಲಿ ನಡೆದಿದ್ದ ಚರ್ಚೆಗಳುಮತ್ತೆ ಮರುಕಳಿಸಲಿ ಎಂದು ಆಶಿಸಿದರು.

ಮಾಜಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ವಿಧಾನಸಭೆಯ ಘನತೆ, ಗೌರವಗಳನ್ನು ಎತ್ತಿ ಹಿಡಿದು ಸತ್‍ಸಂಪ್ರದಾಯಗಳನ್ನು ಮರುಕಳಿಸುತ್ತೀರಿ ಎಂಬ ವಿಶ್ವಾಸವಿದೆ. ಹೆಚ್ಚು ಅನುಭವಿಗಳಾಗಿರುವುದರಿಂದ ಸಭಾಧ್ಯಕ್ಷ ಸ್ಥಾನಕ್ಕೂ ಗೌರವ ಬರುತ್ತದೆ ಎಂದಾಗ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಅಧಿವೇಶನ ಚೆನ್ನಾಗಿ ನಡೆದರೆ ಅದರ ಅನುಕೂಲ ರಾಜ್ಯಕ್ಕೂ ಆಗಲಿದೆ. ಸಭಾಧ್ಯಕ್ಷರಾದ ನಿಮ್ಮ ಅಧ್ಯಕ್ಷತೆಯಲ್ಲಿ ಆ ರೀತಿಯ ಅಧಿವೇಶನ ನಡೆಯಲಿದೆ ಹಾರೈಸಿದರು.

Facebook Comments