ರೆಸಾರ್ಟ್‍ನಿಂದ ವಿಧಾನಸೌಧದತ್ತ ಜೆಡಿಎಸ್ ಶಾಸಕರು

ಈ ಸುದ್ದಿಯನ್ನು ಶೇರ್ ಮಾಡಿ

JDS-MLA

ಬೆಂಗಳೂರು, ಮೇ 25- ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರು ಒಟ್ಟಾಗಿ ಇಂದು ವಿಧಾನಸೌಧಕ್ಕೆ ಆಗಮಿಸಿದರು. ರೆಸಾರ್ಟ್‍ನಿಂದ ಬಸ್‍ನಲ್ಲಿ ಆಗಮಿಸಿದ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡರು. ವಿಧಾನಸಭಾಧ್ಯಕ್ಷರ ಚುನಾವಣೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿಶ್ವಾಸಮತಯಾಚನೆಯ ಅಧಿವೇಶನಕ್ಕೆ ಒಟ್ಟಾಗಿ ಆಗಮಿಸಿದರು.

ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಾಟವಾದ ಬೆನ್ನಲ್ಲೇ ಆಪರೇಷನ್ ಕಮಲದ ಭೀತಿಯಿಂದ ಹೋಟೆಲ್ ಹಾಗೂ ರೆಸಾರ್ಟ್‍ಗಳಲ್ಲಿ ಶಾಸಕರು ವಾಸ್ತವ್ಯ ಹೂಡಿದ್ದರು. ಸುಮಾರು 10 ದಿನಗಳಿಂದಲೂ ಇದೇ ರೀತಿ ಹೋಟೆಲ್ ಹಾಗೂ ರೆಸಾರ್ಟ್‍ಗಳಲ್ಲಿ ಶಾಸಕರು ಬೀಡುಬಿಟ್ಟದ್ದರು. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಪತನವಾದರೂ ಜೆಡಿಎಸ್ ಶಾಸಕರಿಗೆ ಆಪರೇಷನ್ ಕಮಲದ ಭೀತಿ ದೂರವಾಗಲಿಲ್ಲ. ಹೀಗಾಗಿ ವಿಶ್ವಾಸಮತಯಾಚನೆ ಸಾಬೀತುಪಡಿಸುವವರೆಗೂ ಜೆಡಿಎಸ್‍ನ ಎಲ್ಲಾ ಶಾಸಕರನ್ನು ಒಂದೆಡೆ ಸೇರಿಸಿ ಬಿಜೆಪಿ ನಾಯಕರ ಸಂಪರ್ಕಕ್ಕೆ ಸಿಗದಂತೆ ಮಾಡಲಾಗಿತ್ತು.

Facebook Comments

Sri Raghav

Admin