BREAKING : ಸೋಮವಾರ (ಮೇ.28ರಂದು) ಕರ್ನಾಟಕ ಬಂದ್..!

ಈ ಸುದ್ದಿಯನ್ನು ಶೇರ್ ಮಾಡಿ

 

yadiyurappa

ಬೆಂಗಳೂರು. ಮೇ.25: ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಲು ವಿಳಂಬ ಮಾಡುತ್ತಿರುವುದಕ್ಕೆ ಮೇ.28ರಂದು ಸೋಮವಾರ ಕರ್ನಾಟಕ ಬಂದ್’ಗೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ. ಹೋಟೆಲ್ ಗಳಿಗೆ ಬೀಗ ಹಾಕಿ , ವಾಹನಗಳ ಸಂಚಾರ ಬೇಡ, ರೈಲುಗಳನ್ನು ತಡೆಯದಂತೆ ಶಾಂತಯುತವಾಗಿ ಸೋಮವಾರ ಬಂದ್ ಮಾಡಲು ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರ ಸ್ವಾಮ ಅವರು ಚುನಾವಣಾ ಪೂರ್ವ ಜೆಡಿಎಸ್ ಪಕ್ಷ ನೀಡಿದ ಭರವಸೆಯಂತೆ ರೈತರ ಸಾಲವನ್ನು ಇಂದು ಸಂಜೆಯೊಳಗೆ ಸಂಪೂರ್ಣ ಮನ್ನಾ ಮಾಡದಿದ್ದರೆ ಕರ್ನಾಟಕ ಬಂದ್’ಗೆ ಕರೆ ನೀಡುತ್ತೇವೆ ಎಂದು ಎಚ್ಚರಿಸಿ ಸಭಾತ್ಯಾಗ ಮಾಡಿದ್ದರು.

 

Facebook Comments

Sri Raghav

Admin