ಆಪರೇಷನ್ ಚೀತಾ ಸಕ್ಸಸ್, ರೇಷ್ಮೆ ಸಾಕಣೆ ಕೊಠಡಿಯಲ್ಲಿ ಅಡಗಿ ಕುಳಿತಿದ್ದ ಚಿರತೆ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Chirate--01

ಕನಕಪುರ, ಮೇ 26-ಆಹಾರವನ್ನು ಅರಸಿ ಕಾಡಿನಿಂದ ನಾಡಿಗೆ ಬಂದು ರೇಷ್ಮೆ ಹುಳು ಸಾಕಣೆ ಕೊಠಡಿಯೊಂದರಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಲ್ಲೂಕಿನ ಬೇಲಿ ಕೊತ್ತನೂರು ಗ್ರಾಮದ ಜಗದೀಶ್ ಎಂಬುವರಿಗೆ ಸೇರಿದ ರೇಷ್ಮೆ ಸಾಕಾಣಿಕೆ ಕೊಠಡಿಗೆ ಕಳೆದ ರಾತ್ರಿ 11.30ರ ಸುಮಾರಿನಲ್ಲಿ ನುಗ್ಗಿದ್ದು ಈ ವೇಳೆ ಕೊಠಡಿಯಲ್ಲಿದ್ದ ತಮ್ಮಯ್ಯ ಎಂಬುವರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.

ಕೂಡಲೇ ಎಚ್ಚೆತ್ತುಕೊಂಡ ಮಾಲೀಕ ಜಗದೀಶ್ ತಮ್ಮಯ್ಯನನ್ನು ರಕ್ಷಿಸಿ ಕೊಠಡಿಯ ಬಾಗಿಲನ್ನು ಹಾಕಿಕೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದಿದ್ದಾರೆ.

ಚಿರತೆ ನೋಡಲು ಗ್ರಾಮಸ್ಥರ ದಂಡು:
ರೇಷ್ಮೆ ಕೊಠಡಿಯಲ್ಲಿ ಚಿರತೆ ಅಡಗಿ ಕುಳಿತಿರುವ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ್ದು , ತಡ ರಾತ್ರಿಯೇ ಗ್ರಾಮಸ್ಥರು ಚಿರತೆ ವೀಕ್ಷಣೆಗಾಗಿ ರೇಷ್ಮೆ ಕೊಠಡಿಯ ಮುಂದೆ ಜಮಾಯಿಸಿ ಕಿಟಕಿಯ ಮೂಲಕ ವೀಕ್ಷಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ತಮ್ಮಯ್ಯನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Facebook Comments

Sri Raghav

Admin