ಕೃಷಿಯ ವಾಹನಗಳಲ್ಲೇ ನಡೆಯುತ್ತೆ ರೋಚಕ ರೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

dS-1

ಕೃಷಿ ವಾಹನಗಳನ್ನೇ ಸ್ಪರ್ಧೆಗೆ ಬಳಸಿಕೊಳ್ಳುವ ಮನುಷ್ಯರ ಬುದ್ಧಿವಂತಿಕೆಗೆ ಮೆಚ್ಚಲೇಬೇಕು. ಹುಲ್ಲು ಕತ್ತರಿಸುವ ಯಂತ್ರ-ಲಾನ್ ಮೋವರ್ ರೇಸ್ ಇಂಗ್ಲೆಂಡ್‍ನಲ್ಲಿ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದೆ. ಈ ರೋಚಕ ರೇಸ್‍ನಲ್ಲಿ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿಯೇ ನಡೆಯಿತು.  ಇಂಗ್ಲೆಂಡ್‍ನ ವೆಸ್ಟ್ ಸುಸ್ಸೆಕ್ಸ್‍ನ ಬಿಲ್ಲಿಂಗ್ಸ್‍ಹುಸ್ರ್ಟ್‍ನಲ್ಲಿ ಲಾನ್ ಮೋವರ್ ರೇಸಿಂಗ್ ಸೀಸನ್ ಆರಂಭವಾಗಿದೆ. ಮೇನಿಂದ ಅಕ್ಟೋಬರ್‍ವರೆಗೆ ವಿವಿಧ ಹಂತಗಳಲ್ಲಿ ನಡೆಯುವ ಈ ರೇಸ್‍ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಈ ಗೋ-ಕಾರ್ಟ್ ರೇಸ್‍ಗಿಂತ ಭಿನ್ನವಾಗಿದ್ದು, ಮೋಜು-ಮನರಂಜನೆ ನೀಡುವ ಲಾನ್ ಮೋವರ್ ರೇಸ್ ವೀಕ್ಷಿಸಲು ಸಾವಿರಾರು ಮಂದಿ ಜಮಾಯಿಸುತ್ತಾರೆ.
ರೇಸ್ ಅನೇಕ ಕಠಿಣ ಸವಾಲುಗಳನ್ನು ಒಳಗೊಂಡಿದ್ದು, ಚಾಲಕರು ನೈಪುಣ್ಯತೆ ಮತ್ತು ತಾಂತ್ರಿಕ ಕಸರತ್ತುಗಳನ್ನು ಪ್ರದರ್ಶಿಸಬೇಕಾಗುತ್ತದೆ. ಫಾರ್ಮುಲಾ ಒನ್ ಕಾರ್ ರೇಸ್ ಮಾದರಿಯಲ್ಲಿ ಸ್ಕೋರ್‍ನನ್ನು ಪರಿಗಣಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ನಾಲ್ಕು ರೇಸ್‍ಗಳಿದ್ದು, ಗರಿಷ್ಟ 100 ಅಂಕಗಳನ್ನು ಗಳಿಸುವ ಅವಕಾಶ ಇರುತ್ತದೆ. ಸುರಕ್ಷತೆಗಾಗಿ ಈ ಯಂತ್ರದ ಎಲ್ಲ ಬ್ಲೇಡುಗಳನ್ನು ತೆಗೆದು ರೇಸ್‍ಗಾಗಿ ಲಾನ್ ಮೋವರ್‍ಗಳನ್ನು ವಿಶೇಷವಾಗಿ ಸಿದ್ದಗೊಳಿಸಲಾಗಿತ್ತು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಲಾನ್ ಮೋವರ್ ಚಾಲಕರ ನಡುವೆ ತೀವ್ರ ಪೈಪೋಟಿ ಇತ್ತು.  ಮೊದಲ ದಿನದ ನಂತರ ಗ್ರೂಪ್ ಟುನಲ್ಲಿ ಮೈಕ್ ಕ್ರೆಸ್‍ವೆಲ್, ಗ್ರೂಪ್ ಥ್ರೀನಲ್ಲಿ ಡೀನ್ ಫುಲ್ಲೆರ್ ಹಾಗೂ ಗ್ರೂಪ್ ಫೋರ್‍ನಲ್ಲಿ ಡ್ಯಾನ್ ಜೋನ್ಸ್ ವಿಜೇತರಾದರು.

Facebook Comments

Sri Raghav

Admin