ಕೋಲ್ಕತ್ತಾ ಮಣಿಸಿ ಫೈನಲ್’ಗೇರಿದ ಹೈದರಾಬಾದ್, ಭಾನುವಾರ ಚನ್ನೈ ಜೊತೆ ಫೈನಲ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

Final--001

ಕೋಲ್ಕತ್ತಾ. ಮೇ.26 : ಕೋಲ್ಕತ್ತಾ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಐಪಿಎಲ್ ಅಂತಿಮ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡವನ್ನು 13 ರನ್ ಗಳಿಂದ ಮಣಿಸಿದ ಸನ್‌ ರೈಸರ್ಸ್‌ ಹೈದರಾಬಾದ್‌ ಫೈನಲ್‌’ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಮೇ 27ರಂದು ಮುಂಬೈನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಕಿಂಗ್ಸ್‌ ತಂಡವನ್ನು ಎದುರಿಸಲಿದ್ದಾರೆ ಸನ್‌ ರೈಸರ್ಸ್‌.

ನಿನ್ನೆ ನಡೆದ ಕ್ವಾಲಿಫೈಯರ್‌ ಪಂದ್ಯದಲ್ಲಿ ಟಾಸ್ ಸೋತು ಇನಿಂಗ್ಸ್ ಆರಂಭಿಸಿದ ಹೈದರಾಬಾದ್ ಶಿಖರ್ ಧವನ್ (34) ಮತ್ತು ವೃದ್ಧಿಮಾನ್ ಸಾಹಾ (35) ರಶೀದ್ ಖಾನ್ ( 10 ಎಸೆತಗಳಲ್ಲಿ 34 ರನ್) ನೆರವಿನೊಡನೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳನ್ನೂ ಗಳಿಸಿ ಕೇಕೆ ಆರ್ ಗೆ 175 ರನ್ ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಈ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತಾ ನೈಟ್‌ ರೈಡರ್ಸ್‌ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 161 ರನ್ ಗಳನ್ನೂ ಮಾತ್ರ ಗಳಿಸಲು ಶಕ್ತವಾಯಿತು. ಕಲ್ಕತ್ತ ಪರ ಕ್ರಿಸ್ ಲಿನ್ (48), ಸುನೀಲ್ ನಾರಾಯಣ್ (26) , ಶುಬ್ಮುನ್ ಗಿಲ್ (30) ಕೇನ್ ವಿಲಿಯಮ್ಸನ್ (3), ಸುನಿಲ್ ನರೈನ್ 26 ಮತ್ತು ರಾಣಾ 22 ರನ್ ಗಳಿಸಿದರು.

ಹೈದರಾಬಾದ್ ಪರವಾಗಿ ರಶೀದ್ ಖಾನ್ 3, ಬ್ರಾಥ್ ವೇಟ್2 ಮತ್ತು ಸಿದ್ಧಾರ್ಥ್ ಕೌಲ್ ವಿಕೆಟ್ ಪಡೆದು ಮಿಂಚಿದರು. ಭಾನುವಾರ ಮುಂಬೈನಲ್ಲಿ ನಡೆವ ಫೈನಲ್ಸ್ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ಇದಾಗಲೇ ಫೈನಲ್ ತಲುಪಿರುವ ಚೆನ್ನೈ ಸೂಪರ್ ಕಿಂಗ್ಸ್ ನ್ನು ಎದುರಿಸಲಿದೆ. ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿದ್ದೆ, ಫೈನಲ್ ರೋಚಕತೆಯಿಂದ ಕೂಡಿರುವ ಸಾಧ್ಯತೆಗಳಿವೆ.

ಸಂಕ್ಷಿಪ್ತ ಸ್ಕೋರ್ :
ಸನ್‌ ರೈಸರ್ಸ್‌ ಹೈದರಾಬಾದ್‌ : 174/7
ಕೋಲ್ಕತಾ ನೈಟ್‌ ರೈಡರ್ಸ್‌ : 160/9

Facebook Comments

Sri Raghav

Admin