ನಮ್ಮ ತ್ಯಾಗ ಗುರುತಿಸಿ ಕಾಂಗ್ರೆಸ್’ಗೆ ಮತಹಾಕಿ, ಆರ್ ಆರ್ ನಗರ ಜನತೆಯಲ್ಲಿ ಡಿಕೆಶಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar

ಬೆಂಗಳೂರು, ಮೇ 26-ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹಲವು ಕಡೆ ಪ್ರಚಾರ ಮಾಡುತ್ತೇವೆ. ನಮಗೇ ಬೆಂಬಲಿಸುವಂತೆ ಜೆಡಿಎಸ್ ನಾಯಕರಿಗೂ ಮನವಿ ಮಾಡಿದ್ದೆವು. ಆದರೆ ಅಭ್ಯರ್ಥಿಗಳನ್ನು ಹಾಕಿರುವುದರಿಂದ ಇಂದು ತೆಗೆಯುವುದು ಕಷ್ಟವೆಂದಿದ್ದಾರ. ಹೀಗಾಗಿ ನಾನು ಜೆಡಿಎಸ್ ನಾಯಕರ, ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಎಷ್ಟು ದೊಡ್ಡ ತ್ಯಾಗ ಮಾಡಿದೆ. ಇದನ್ನು ಗುರುತಿಸಿ ನಮ್ಮ ಅಭ್ಯರ್ಥಿ ಪರ ನಿಲ್ಲಬೇಕು ಎಂದು ಹೇಳಿದರು.  ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡುತ್ತೇನೆ. ಆರ್.ಆರ್.ನಗರ ಚುನಾವಣೆ ನಡೆದ ಮೇಲೆ ದೆಹಲಿಗೆ ತೆರಳಲಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Facebook Comments

Sri Raghav

Admin