ಮೇ 28ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳು ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

vv-exam
ಬೆಂಗಳೂರು, ಮೇ 26- ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಚುನಾವಣೆ ಮೇ 28ರಂದು ನಡೆಯಲಿರುವುದರಿಂದ ಅಂದು ನಡೆಯ ಬೇಕಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಬೆಂಗಳೂರು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.2ನೇ ಸೆಮಿಸ್ಟರ್‍ನ ಬಿ.ಎ ಬಿ.ಎಸ್ಸಿ,ಬಿಕಾಂ.ಬಿಬಿಎ,ಬಿಎಚ್‍ಎಂ, ಬಿಎಸ್‍ಡಬ್ಲ್ಯೂ, ಬಿಸಿಎ, ಫುಡ್ ಪ್ರೋಸೆಸಿಂಗ್ ಪರೀಕ್ಷೆಗಳು ಮತ್ತು 4ನೇ ಸೆಮೀಸ್ಟರ್‍ನ ಬಿವೋಕ್ ಪರೀಕ್ಷೆಗಳು ಜೂ 13 ರಂದು ನಡೆಯಲಿವೆ.6ನೇ ಸೆಮಿಸ್ಟರ್ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಎಚ್‍ಎಂ, ಬಿವಿಎ, ಪರೀಕ್ಷೆಗಳು ಜೂ7ರಂದು ಹಾಗೂ 2ನೇ ಸೆಮೀಸ್ಟರ್‍ನ ಬಿಎ,ಬಿಎಸ್ಸಿ, ಪರೀಕ್ಷೆಗಳು ಜೂ 14ರಂದು ನಡೆಸುವುದಾಗಿ ತಿಳಿಸಿದ್ದಾರೆ.

Facebook Comments

Sri Raghav

Admin