ಸಿಬಿಎಸ್‍ಸಿ 12ನೆ ತರಗತಿ ಫಲಿತಾಂಶ ಪ್ರಕಟ, ಮೇಘನಾ ಶ್ರೀವಾತ್ಸವ್ ಟಾಪರ್

ಈ ಸುದ್ದಿಯನ್ನು ಶೇರ್ ಮಾಡಿ

CBSC

ನವದೆಹಲಿ, ಮೇ 26- ಸಿಬಿಎಸ್‍ಸಿ 12ನೆ ತರಗತಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಉತ್ತರ ಪ್ರದೇಶದ ಮೇಘನಾ ಶ್ರೀವಾತ್ಸವ 500ಕ್ಕೆ 499 ಅಂಕಗಳನ್ನು ಗಳಿಸಿ ಟಾಪರ್ ಆಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿರುವುದು ವಿಶೇಷ. ಉತ್ತರ ಪ್ರದೇಶದವರೇ ಆದ ಅನುಷ್ಕಾ ಚಂದ್ರ (498) ಹಾಗೂ ರಾಜಸ್ಥಾನದ ಚಾಹತ್ ಬೋದ್‍ರಾಜ್ (497) ಕ್ರಮವಾಗಿ ಎರಡು ಮತ್ತು ಮೂರನೆ ಸ್ಥಾನ ಗಳಿಸಿದ್ದಾರೆ.

ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದು, ಶೇ.88.31 ಫಲಿತಾಂಶ ದಾಖಲಿಸಿದ್ದರೆ, ಬಾಲಕರ ಸಾಧನೆ ಶೇ.78.09. ಒಟ್ಟಾರೆ ಶೇ.83.01 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕೇರಳದ ತಿರುವನಂತಪುರಂ ಶೇ.97.32 ತೇರ್ಗಡೆ ಪ್ರಮಾಣದೊಂದಿಗೆ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನಗಳನ್ನು ಚೆನ್ನೈ (ಶೇ.93.87) ಹಾಗೂ ದೆಹಲಿ (ಶೇ.89) ಆಕ್ರಮಿಸಿಕೊಂಡಿವೆ. ಕಳೆದ ಒಂದು ತಿಂಗಳಿನಿಂದ ಫಲಿತಾಂಶಕ್ಕಾಗಿ 12 ಲಕ್ಷ ವಿದ್ಯಾರ್ಥಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದರು. ಇಂದು ಅವರ ನಿರೀಕ್ಷೆ ಅಂತ್ಯಗೊಂಡಿದ್ದು, ಫಲಿತಾಂಶ ಹೊರಬಿದ್ದಿದೆ.

Facebook Comments

Sri Raghav

Admin