ಸೂರತ್’ನ ಹಾಟ್ ಅಂಡ್ ಸೆಕ್ಸಿ ಲೇಡಿ ಡಾನ್‍ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Lady-Don--01
ಸೂರತ್, ಮೇ 26- ಬಾಲಿವುಡ್ ತಾರೆಯರನ್ನೇ ನಾಚಿಸುವ ಸುರಸುಂದರಿ ಈಕೆ. ಆದರೆ ಇವರು ಕುಖ್ಯಾತ ಕ್ರಿಮಿನಲ್, ಸೂರತ್‍ನ ಲೇಡಿ ಡಾನ್ ಎಂದೇ ಕುಪ್ರಸಿದ್ಧಿಯಾಗುವ ಅಸ್ಮಿಕಾ ಗೋಹಿಲ್ ಅಲಿಯಾಸ್ ಭುರಿ ಈಗ ಮತ್ತೆ ಪೊಲೀಸ್‍ರ ಅತಿಥಿಯಾಗಿದ್ದಾರೆ. ತನ್ನ ಗೆಳೆಯನೊಂದಿಗೆ ಲಾಂಗ್ ಝಳಪಿಸುತ್ತಾ ಅಂಗಡಿಯೊಂದಕ್ಕೆ ನುಗ್ಗಿ ಮಾಲೀಕನಿಗೆ ಪ್ರಾಣ ಬೆದರಿಕೆ ಹಾಕಿ, ಹಣ ಲೂಟಿ ಮಾಡಿದ್ದಳು. ಈ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಎಚ್ಚೆತ್ತುಕೊಂಡ ಲೇಡಿ ಡಾನ್‍ರನ್ನು ವಾರಚ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚೆಲುವಿನ ಚಿನ್ನಾರಿಯಾಗಿರುವ ಇವಳು ಹೆಮ್ಮಾರಿ, ಹಣಸುಲಿಗೆ, ಲೂಟಿ, ಪ್ರಾಣಬೆದರಿಕೆ, ಬೈಕ್ ಕಳವು ಸೇರಿದಂತೆ ಅನೇಕ ಅಪರಾಧ ಕೃತ್ಯಗಳಲ್ಲಿ ಈಕೆ, ಶಾಮೀಲಾಗಿದ್ದಾಳೆ ವಾರಚ ಪೊಲೀಸ್ ಠಾಣೆಯ ರೌಡಿ ಶೀಟರ್ ಈಕೆ ಬಾಲಿವುಡ್ ನಟಿಯರಂತೆ ಅತ್ಯಂತ ಫ್ಯಾಷನ್ ಉಡುಪು ಮತ್ತು ಸನ್‍ಗ್ಲಾಸ್ ಧರಿಸಿ ಈಕೆ ಬೈಕ್ ಏರಿ ಹೊರಟರೇ ಅಲ್ಲಿ ಒಂದು ಅಪರಾಧ ಕೃತ್ಯ ನಡೆಯುತ್ತದೆ ಎಂದೇ ಅರ್ಥ.

bhuri_don

ಗ್ಲಾಮರ್ ಖನಿಯಾಗಿರುವ ಅಸ್ಮಿಕಾ ಅಲಿಯಾಸ್ ಭುರಿಗೆ ಬೈಕ್‍ಗಳ ಕ್ರೇಜ್, ಅತ್ಯಂತ ವೇಗವಾಗಿ ದ್ವಿಚಕ್ರವಾಹನಗಳನ್ನು ಚಾಲನೆ ಮಾಡುವುದು ಈಕೆಗೆ ಫ್ಯಾಷನ್. ಸೂರತ್ ಮಂದಿ ಈಕೆಯನ್ನು ನೋಡಿ ಹೆದರುತ್ತಾರೆ, ಹಲವಾರು ಬಾರಿ ಬಂಧನಕ್ಕೆ ಒಳಗಾಗಿರುವ ಈಕೆ ವಿರುದ್ದ ಅನೇಕ ಕೇಸ್‍ಗಳಿವೆ. ಕಳೆದ ವಾರ ಭುರಿ ಬೈಕ್‍ನನ್ನು ಕದ್ದಿದ್ದಳು, ಈಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾಳೆ.

Lady-Don--05

Lady-Don--04

Lady-Don--02

Facebook Comments

Sri Raghav

Admin