ಸ್ವಾತಂತ್ರ್ಯ ಹೊರಾಟಗಾರ, ಮಾಜಿ ಶಾಸಕ ಗಂಗಾಧರನ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Gangadhar--01

ಮೈಸೂರು, ಮೇ 26- ಹಿರಿಯ ಸ್ವಾತಂತ್ರ್ಯ ಹೊರಾಟಗಾರ, ಮಾಜಿ ಶಾಸಕ, ಜೆಎಸ್‍ಎಸ್ ಸಂಸ್ಥೆಯೊಂದಿಗೆ ಒಡನಾಟ ಇಟ್ಟುಕೊಂಡಿದ್ದ ಎಚ್.ಗಂಗಾಧರನ್ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು, ವಯೋಸಹಜ ರೋಗಗಳಿಂದ ಬಳಲುತ್ತಿದ್ದ ಅವರು ಬೆಳಿಗ್ಗೆ ಸುಮಾರು 9ಗಂಟೆ ಸಮಯದಲ್ಲಿ ನಗರದ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ 1978ರಲ್ಲಿ ಬಿಜೆಪಿ ಶಾಸಕರಾಗಿದ್ದರು. ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸೇರಿದಂತೆ ಪಕ್ಷಾತೀತವಾಗಿ ಹಾಲಿ ಮಾಜಿ ಶಾಸಕರು ರಾಜಕೀಯ ವ್ಯಕ್ತಿಗಳು ಗಂಗಾಧರನ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin