ಆಸ್ಪತ್ರೆಗೆ ತರಳಿದ್ದ ಗರ್ಭಿಣಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ ಕಾಮಪಿಶಾಚಿಗಳು…!

ಈ ಸುದ್ದಿಯನ್ನು ಶೇರ್ ಮಾಡಿ

Rape-Hands--01
ಗುರ್‍ಗಾಂವ್, ಮೇ 27- ರಾಜಧಾನಿ ದೆಹಲಿ ಸಮೀಪದ ಗುರ್‍ಗಾಂವ್‍ನಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂಥ ಹೇಯ ಘಟನೆ ನಡೆದಿದೆ. ಆಸ್ಪತ್ರೆಗೆ ತಪಾಸಣೆಗಾಗಿ ತೆರಳಿ ಹಿಂದಿರುಗುತ್ತಿದ್ದ ಆರು ತಿಂಗಳ ಗರ್ಭಿಣಿ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಗುರುಗಾಂವ್‍ನ ಮಾನೆಸರ್‍ನಲ್ಲಿ ಆಟೋ ಚಾಲಕ ಮತ್ತು ಆತನ ಇಬ್ಬರು ಸ್ನೇಹಿತರು ಈ ಕೃತ್ಯ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೇ 21ರಂದು ಈ ಘಟನೆ ನಡೆದಿದೆ. ಮಾನೆಸರ್‍ನ ಆಸ್ಪತ್ರೆಯಲ್ಲಿ ತಪಾಸಣೆಗಾಗಿ ತನ್ನ ಪತಿ ಜೊತೆ 23 ವರ್ಷ ಗರ್ಭಿಣಿ ಸೈಕಲ್ ಮೇಲೆ ತೆರಳಿದ್ದಳು. ತಪಾಸಣೆ ಬಳಿಕ ಹಿಂದುಗುತ್ತಿದ್ದಾಗ ಸೈಕಲ್ ಸವಾರಿ ಈಕೆಗೆ ಅನಾನುಕೂಲವಾಯಿತು. ಪತಿ ಆಟೋದಲ್ಲಿ ಬರುವಂತೆ ಸೂಚಿಸಿ ಗ್ರಾಮದತ್ತ ಒಬ್ಬಂಟಿಯಾಗಿ ಸೈಕಲ್ ತುಳಿಯುತ್ತಾ ಹಿಂದಿರುಗಿದರು. ತನ್ನ ಪತ್ನಿ ದೀರ್ಘ ಸಮಯವಾದರೂ ಮನೆಗೆ ಹಿಂದಿರುಗಲಿಲ್ಲ. ಇದರಿಂದ ಆತಂಕಗೊಂಡ ಪತಿ ಹುಡುಕುತ್ತಾ ಬಂದಾಗ ಮಾರ್ಗ ಮಧ್ಯದಲ್ಲೇ ಗರ್ಭಿಣಿ ಪತ್ನಿ ಅಸ್ವಸ್ಥಳಾಗಿ ಬಿದ್ದಿರುವುದು ಪತ್ತೆಯಾಯಿತು. ಆಕೆಯನ್ನು ಈ ಬಗ್ಗೆ ವಿಚಾರಿಸಿದಾಗ ನಡೆದ ಕೃತ್ಯ ತಿಳಿದುಬಂದಿತು.

ಆಟೋದಲ್ಲಿ ಬರುತ್ತಿದ್ದ ಮಹಿಳೆ ನಿತ್ರಾಣಗೊಂಡಾಗ ಆಟೋ ಚಾಲಕ ಆಕೆಗೆ ನೀರು ನೀಡಿದ. ನೀರು ಸೇವಿಸಿ ಅರೆ ಪ್ರಜ್ಞಾವಸ್ಥೆಯಾದ ಗರ್ಭಿಣಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆಟೋ ಚಾಲಕ ಮತ್ತು ಆತನ ಇಬ್ಬರು ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿ ಪರಾರಿಯಾದರು. ಈ ಸಂಬಂಧ ಸಂತ್ರಸ್ತೆ ಮತ್ತು ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ.

Facebook Comments

Sri Raghav

Admin