ಸನ್‍ರೈಸರ್ಸ್’ನ್ನು ಮಣಿಸಿ ಐಪಿಎಲ್ ಕಪ್ ಎತ್ತಿಹಿಡಿದ ಚೆನ್ನೈ ‘ಸೂಪರ್’ ಕಿಂಗ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Watsan

ಮುಂಬೈ , ಮೇ 27- ತೀವ್ರ ಕುತೂಹಲ ಕೆರಳಿಸಿದ್ದ   ಹನ್ನೊಂದನೇಯ ಆವೃತ್ತಿಯ ಐಪಿಎಲ್  ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ, ಮೂರನೇ ಬಾರಿಗೆ  ಐಪಿಎಲ್ ಕಪ್ ಎತ್ತಿಹಿಡಿದಿದೆ. ಮುಂಬೈ ನಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಶೇನ್ ವಾಟ್ಸನ್ ಅದ್ಭುತ ಶತಕದ ನೆರವಿನಿಂದ ಸಿಎಸ್‍ಕೆ ಹೈದರಾಬಾದ್ ತಂಡವನ್ನು ಮಣಿಸಿ ಐಪಿಎಲ್ ಕಪ್ ಎತ್ತಿ ಹಿಡಿಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‍ರೈಸರ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಚನ್ನೈಗೆ 179 ರನ್ ಗಳ ಬಿಗ್ ಟಾರ್ಗೆಟ್’ನ್ನೇ ನೀಡಿ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿತ್ತು . ಆದರೆ ಚನ್ನೈ ತಂಡದ ಶೇನ್ ವಾಟ್ಸನ್ ಹೈದರಾಬಾದ್ ಕನಸನ್ನು ನುಚ್ಚುನೂರು ಮಾಡಿಬಿಟ್ಟ. 179 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಸಿಎಸ್ಕೆ 18.3 ಓವರ್ ನಲ್ಲಿ 181 ರನ್ ಗಳಿಸುವ ಮೂಲಕ ಹೈದರಾಬಾದ್ ತಂಡವನ್ನು ನಿರಾಯಾಸವಾಗಿ ಮಣಿಸಿತು. ಅಮೋಘ ಶತಕ ಸಿಡಿಸಿದ ಶೇನ್ ವಾಟ್ಸನ್ 117ರನ್ ಗಳಿಸಿ ಚನ್ನೈ ಗೆಲುವಿನ ಹೀರೊ ಎನಿಸಿದರು. ಇನ್ನುಳಿದಂತೆ ರೈನಾ -32, ಡುಪ್ಲೆಸಿಸ್-10 ಮತ್ತು ರಾಯುಡು 17 ರನ್ ಗಳಿಸಿ ಮಿಂಚಿದರು. ಸನ್‍ರೈಸರ್ಸ್ ತಂಡ ಫೈನಲ್‍ಗೇರುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಶೀದ್ ಖಾನ್ ಇಂದಿನ ಪಂದ್ಯದಲ್ಲಿ ವಿಕೆಟ್ ಉರುಳಿಸುವಲ್ಲಿ ವಿಫಲರಾದರು.

ಸಂಕ್ಷಿಪ್ತ ಸ್ಕೋರ್ :
ಸನ್‍ರೈಸರ್ಸ್ ಹೈದರಾಬಾದ್  : 178/6
ಚನ್ನೈ ಸೂಪರ್ ಕಿಂಗ್ಸ್  : 181/2 (18.3/20 

Facebook Comments

Sri Raghav

Admin