ಚಲನಚಿತ್ರರಂಗಕ್ಕೆ ಚಿಕ್ಕಮಗಳೂರು ಸ್ಟುಡಿಯೋ ಇದ್ದಂತೆ : ಭಾರತಿ ವಿಷ್ಣುವರ್ಧನ್

ಈ ಸುದ್ದಿಯನ್ನು ಶೇರ್ ಮಾಡಿ

bharati--01

ಚಿಕ್ಕಮಗಳೂರು,ಮೇ 27- ಚಲನಚಿತ್ರರಂಗಕ್ಕೆ ಚಿಕ್ಕಮಗಳೂರು ಸ್ಟುಡಿಯೋ ಇದ್ದಂತೆ. ಇಲ್ಲಿ ನೂರಾರು ಚಲನಚಿತ್ರಗಳ ಚಿತ್ರೀಕರಣಗೊಂಡಿದೆ ಎಂದು ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.  ನಗರದ ಕುವೆಂಪು ಕಲಾಮಂದಿರದಲ್ಲಿ ಪೂರ್ವಿ ಸಂಗೀತ ಅಕಾಡೆಮಿ ಯುರೇಕಾ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಒಲುಮೆ ಸಿರಿ ಚಲನಚಿತ್ರ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮಗೆ ದೊರೆತ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಕರ್ಮಫಲಗಳನ್ನು ಭಗವಂತನಿಗೆ ಬಿಡಬೇಕು. ನಮ್ಮದು ಎನ್ನುವುದು ಏನೂ ಇಲ್ಲ. ನಾವು ಕೇವಲ ಗೊಂಬೆಗಳು. ನಮ್ಮನ್ನು ಆಡಿಸುವ ಸೂತ್ರದಾರ ಆ ಭಗವಂತ. ಇನ್ನೊಬ್ಬರ ಬಗ್ಗೆ ಅಸೂಯೆ, ಹೊಟ್ಟೆ ಕಿಚ್ಚು ಪಡುವುದನ್ನು ಬಿಟ್ಟರೆ ತಾವಾಗಿಯೇ ಮೇಲೆ ಬರಲು ಸಾಧ್ಯ ಎಂದರು.  ಚಲನಚಿತ್ರರಂಗ ಈಗ ಹಿಂದಿಗಿಂತ ಅಭಿವೃದ್ದಿಯಾಗಿದೆ. ಹೊಸ ಕಲಾವಿದರು, ವಿಭಿನ್ನ ಚಿತ್ರಗಳು ತೆರೆಗೆ ಬರುತ್ತಿವೆ ಎಂದರು. ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಡಾ.ಜೆ.ಪಿ.ಕೃಷ್ಣೇಗೌಡ, ದೀಪಕ್ ದೊಡ್ಡಯ್ಯ, ಪೂರ್ವಿ ಸಂಘಟನೆಯ ಕಲಾವಿದರಾದ ಎಂ.ಎಸ್.ಸುಧೀರ್ ಹಾಗೂ ಮೋಹನ್ ಉಪಸ್ಥಿತರಿದ್ದರು

Facebook Comments

Sri Raghav

Admin