ಬಾಲಿವುಡ್’ನ ಹಿರಿಯ ನಟಿ ಗೀತಾ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Geeta-kapoor

ಮುಂಬೈ. ಮೇ.27 : ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟಿ ಗೀತಾ(57) ಕಪೂರ್ ಮುಂಬೈನಲ್ಲಿ  ವಿಧಿವಶರಾಗಿದ್ದಾರೆ. ಅಂಧೇರಿಯ ವೃದ್ಧಾಶ್ರಮದಲ್ಲಿ ಹಿರಿಯ ನಟಿ ಗೀತಾ ಅವರನ್ನು ರಕ್ತದೊತ್ತಡದ ಏರಿಳಿತದಿಂದ ಬಳಲುತ್ತಿದ್ದ ಗೀತಾ ಅವರನ್ನು ಎಪ್ರಿಲ್ 21ರಂದು ಆಕೆಯ ಪುತ್ರ ರಾಜಾ ಕಪೂರ್ ಮುಂಬೈನಲ್ಲಿ  ಆಸ್ಪತ್ರೆಗೆ ಸೇರಿಸಿ ಹಣ ತರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದ. ಇವರನ್ನು ಮಗ ದೂರ ಮಾಡಿದ್ದರು ಇದೇ ಕೊರಗಿನಲ್ಲಿ ಅಸ್ವಸ್ಥರಾಗಿದ್ದರು. ‘ಪಾಕೀಝಾ’, ‘ರಝಿಯಾ ಸುಲ್ತಾನ್’ ಸೇರಿ ನೂರಾರು ಸಿನಿಮಾಗಳಲ್ಲಿ ಗೀತಾ ಅಭಿನಯಿಸಿದ್ದಾರೆ. ಅವರ ನಿಧನದ ಕುರಿತು ನಿರ್ಮಾಪಕ ಅಶೋಕ್ ಪಂಡಿತ್ ಸ್ಪಷ್ಟನೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಅವರ ಖರ್ಚು ವೆಚ್ಚಗಳನ್ನು ನಿರ್ಮಾಪಕ ಅಶೋಕ್ ಪಂಡಿತ್ ಅವರೇ ನೋಡಿಕೊಳ್ಳುತ್ತಿದ್ದರು.

Facebook Comments

Sri Raghav

Admin