ಬೆಂಗಳೂರಲ್ಲಿ ಅಪಾರ್ಟ್‍ಮೆಂಟ್‍ ನಲ್ಲಿರುವವರನ್ನು ಬೆಚ್ಚಿಬೀಳಿಸುತ್ತೆ ಈ ಸುದ್ದಿ…!

ಈ ಸುದ್ದಿಯನ್ನು ಶೇರ್ ಮಾಡಿ

Apartment-Robbery--01

ಬೆಂಗಳೂರು, ಮೇ 27- ಮುಖಕ್ಕೆ ಕರ್ಚಿಫ್ ಮುಸುಕು ಹಾಕಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ಅಪಾರ್ಟ್‍ಮೆಂಟ್‍ಗೆ ನುಗ್ಗಿ ಎರಡು ಮನೆಯವರನ್ನು ಬೆದರಿಸಿ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಠಾಣಾ ವ್ಯಾಪ್ತಿಯ ಸಲ್ಲಾಪುರದಮ್ಮ ದೇವಸ್ಥಾನದ ಹಿಂಭಾಗದಲ್ಲಿರುವ ಅಪಾರ್ಟ್‍ಮೆಂಟ್‍ನಲ್ಲಿ ನಿನ್ನೆ ರಾತ್ರಿ ಈ ಕೃತ್ಯ ನಡೆದಿದೆ.

ಅಪಾರ್ಟ್‍ಮೆಂಟ್‍ನ ಮೊದಲನೆ ಮಹಡಿಯಲ್ಲಿ ಜಾಕೂಬ್ ಅಮ್ರಾನ್ ಎಂಬಾತ ತನ್ನ ಫ್ಲಾಟ್‍ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದಾಗ ಏಕಾಏಕಿ ಮನೆಗೆ ನುಗ್ಗಿದ ಟೀ ಶರ್ಟ್, ಜರ್ಕಿನ್ ಹಾಕಿದ್ದ ಇಬ್ಬರು ದುಷ್ಕರ್ಮಿಗಳು ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಚಾಕುವಿನಿಂದ ಬೆದರಿಸಿ ಅವರ ಬಳಿಯಿದ್ದ ಮೂರು ಮೊಬೈಲ್ ಅಪಹರಿಸಿ ಪರಾರಿಯಾಗಿದ್ದಾರೆ. ನೆಲಮಹಡಿಯಲ್ಲಿರುವ ವೆಂಕಟೇಶ್ ಮತ್ತು ಆತನ ಸ್ನೇಹಿತರು ಮನೆ ಬಾಗಿಲಿಗೆ ಚಿಲಕ ಹಾಕದೆ ಪಾರ್ಟಿ ಮಾಡುತ್ತಿದ್ದುದನ್ನು ಗಮನಿಸಿದ ದರೋಡೆಕೋರರು ಮನೆಗೆ ನುಗ್ಗಿ ಅಲ್ಲಿದ್ದವರನ್ನು ಚಾಕುವಿನಿಂದ ಬೆದರಿಸಿ ಮೂರು ಮೊಬೈಲ್ ಫೆÇೀನ್, ನಗದು, ಚಿನ್ನಾಭರಣ ಹಾಗೂ ಟಿವಿ ಹೊತ್ತೊಯ್ದಿದ್ದಾರೆ. ಈ ಕುರಿತಂತೆ ವೆಂಕಟೇಶ್ ಮತ್ತು ಜಾಕೂಬ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

Facebook Comments

Sri Raghav

Admin