ಲಿಬಿಯಾದಲ್ಲಿ 40 ವಲಸಿಗರು, ನಿರಾಶ್ರತರ ಹತ್ಯಾಕಾಂಡ

ಈ ಸುದ್ದಿಯನ್ನು ಶೇರ್ ಮಾಡಿ

LKibea

ಬಾನಿ ವಾಲಿದ್, ಮೇ 27-ವಾಯುವ್ಯ ಲಿಬಿಯಾದಲ್ಲಿ ರಹಸ್ಯ ಸೆರೆಮನೆಯಿಂದ ಪರಾರಿಯಾಗುತ್ತಿದ್ದ 40ಕ್ಕೂ ಹೆಚ್ಚು ವಲಸಿಗರು ಮತ್ತು ನಿರಾಶ್ರಿತರನ್ನು ಮಾನವ ಕಳ್ಳಸಾಗಣೆದಾರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ನರಮೇಧದಲ್ಲಿ ಅನೇಕರು ತೀವ್ರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.  ಲಿಬಿಯಾದ ಬಾನಿ ವಾಲಿದ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ಮಾನವ ಕಳ್ಳಸಾಗಣೆ ಪ್ರಕರಣಗಳು ಅವ್ಯಾಹತವಾಗಿ ಮುಂದುವರಿದಿದ್ದು, ಅಮಾಯಕರು ಬಲಿಯಾಗುತ್ತಿದ್ದಾರೆ. ಅನೇಕರನ್ನು ಅಪಹರಿಸಿ ಕಳ್ಳಸಾಗಣೆ ಮೂಲಕ ಗೋಪ್ಯ ಸ್ಥಳದಲ್ಲಿ ಇರಿಸಲಾಗಿತ್ತು. ಇವರಲ್ಲಿ ಹಲವರು ಮಾನವ ಕಳ್ಳಸಾಗಣೆದಾರರ ಬಿಗಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ಬೆನ್ನಟ್ಟಿದ ದುಷ್ಕರ್ಮಿಗಳು ಮನಬಂದಂತೆ ಗುಂಡು ಹಾರಿಸಿ ಸಾಮೂಹಿಕ ಹತ್ಯೆ ನಡೆಸಿದ್ದಾರೆ.
ಈ ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಹತರಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ಧಾರೆ. ಗಾಯಾಳುಗಳನ್ನು ಬಾನಿ ವಾಲಿದ್‍ನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಕೆಲವರ ಸ್ಥಿತಿ ಶೋಚನೀಯವಾಗಿದೆ.

ಹಂತಕರನ್ನು ಸದೆ ಬಡಿಯಲು ಸೇನಾ ಕಾರ್ಯಾಚರಣೆ ಆರಂಭವಾಗಿದೆ. ಸರ್ಕಾರ, ಪೌರಾಡಳಿತ ಸಂಸ್ಥೆಗಳು ಹಾಗೂ ಎನ್‍ಜಿಒಗಳು ಮಾನವ ಕಳ್ಳಸಾಗಣೆ ದಂಧೆ ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿದ್ದರೂ, ಪಿಡುಗು ಮುಂದುವರಿದಿದೆ.

Facebook Comments

Sri Raghav

Admin